ಬೆಂಗಳೂರು: ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾದ ಅಪರೂಪದ ಘಟನೆಯೊಂದರಲ್ಲಿ, ರಸ್ತೆಯಲ್ಲಿ ಸಿಕ್ಕ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೌರಕಾರ್ಮಿಕ ಮಹಿಳೆಯೊಬ್ಬರು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ದಿನದ ಗಳಿಕೆಗಾಗಿಯೇ ಕಷ್ಟಪಡುವ ಪರಿಸ್ಥಿತಿಯಲ್ಲಿದ್ದರೂ, ತಮಗೆ ಸಿಕ್ಕ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಕರ್ಷಣೆಗೆ ಒಳಗಾಗದೆ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ ಮಹಿಳೆಯ ಕಾರ್ಯ ಇಂದಿನ ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ. ಅಭ್ಯಾಸದಂತೆ ರಸ್ತೆ ಸ್ವಚ್ಛಗೊಳಿಸುವ ಕಾಯಕದಲ್ಲಿ…
ಹುಣಸೂರು: ತಾಲೂಕಿನ ನೆರಳಕುಪ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಚ್ಚುವಿನಹಳ್ಳಿ ಕಾಡಂಚಿನ ನೆರಳಕುಪ್ಪೆ ‘ಬಿ’ ಹಾಡಿಯ ಆದಿವಾಸಿ ಕುಟುಂಬಗಳು ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಕಂದಾಯ ಭೂಮಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ (AC) ಶ್ರೀಮತಿ ಕಾವ್ಯರಾಣಿ ಅವರಿಗೆ ಬುಧವಾರ (ಜೂನ್ 3) ಮನವಿ ಸಲ್ಲಿಸಿವೆ. ಹಾಡಿಯ ಹಿರಿಯರಾದ ಕೆಂಪಮ್ಮ ಮತ್ತು ಸೀತೆ ಅವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗವು, ತಮಗೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಟ್ಟಿತು. ಕಾಡಿನಿಂದ ಹೊರಬಂದಾಗಿನಿಂದಲೂ ಸುಮಾರು 50 ವರ್ಷಗಳಿಂದ ನೆರಳಕುಪ್ಪೆ ಸರ್ವೇ…