ಉತ್ತರ ಪ್ರದೇಶ: ಗಂಗಾ ಬ್ಯಾರೇಜ್ ಸಮೀಪದ ಕೃಷಿ ಜಮೀನಿನಲ್ಲಿ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ನತ್ತಪುರವಾ ಗ್ರಾಮದ ಬಳಿ ಗುರುವಾರ ಈ ದುರಂತ ಸಂಭವಿಸಿದೆ. ಗರ್ಗ್ ಏವಿಯೇಷನ್ ಸಂಸ್ಥೆಗೆ ಸೇರಿದ ಟ್ವಿನ್ ಎಂಜಿನ್, ನಾಲ್ಕು ಆಸನಗಳ ‘ಟೆಕ್ನಮ್’ ವಿಮಾನವು ಬೆಳಿಗ್ಗೆ 11.30ರ ಸುಮಾರಿಗೆ ಟೇಕ್‌ಆಫ್ ಆದ 20 ನಿಮಿಷಗಳಲ್ಲೇ ಅಪಘಾತಕ್ಕೀಡಾಗಿದೆ. ಮೃತಪಟ್ಟ ಪೈಲಟ್‌ಗಳು: ಅಭಿಷೇಕ್ ಪೂಜಾರಿ: ಕರ್ನಾಟಕ ಮೂಲದ ತರಬೇತಿ ಪೈಲಟ್. ಸಚಿನ್…
ಬಾಳಿನಲ್ಲಿ ಹೊಸ ಅಧ್ಯಾಯ ಆರಂಭಿಸಿ ಒಟ್ಟಾಗಿ ಜೀವನ ನಡೆಸಬೇಕಿದ್ದ ಯುವ ಜೋಡಿಯೊಂದು ಕೆಲವೇ ಗಂಟೆಗಳ ಅಂತರದಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘೋರ ಘಟನೆ ವರದಿಯಾಗಿದೆ. ವಿಧಿಯ ಕ್ರೂರ ಆಟಕ್ಕೆ ನಿಶ್ಚಿತಾರ್ಥವಾಗಿದ್ದ ಬ್ಯಾಂಕ್ ಉದ್ಯೋಗಿಗಳಿಬ್ಬರು ಬಲಿಯಾಗಿದ್ದು, ಕುಟುಂಬಸ್ಥರನ್ನು ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ. ಮದುವೆ ನಿಶ್ಚಯವಾಗಿದ್ದ ಜೋಡಿ: ಕಾಸರಗೋಡಿನ ಪಳ್ಳಿಕ್ಕರ ಮೂಲದ ಪಿ. ಅನುಶ್ರೀ ಹಾಗೂ ಕಣ್ಣೂರು ಮೂಲದ ವಿ. ಅಮಲ್ ಮೃತಪಟ್ಟ ದುರ್ದೈವಿಗಳು. ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಇತ್ತೀಚೆಗಷ್ಟೇ ವಿಜೃಂಭಣೆಯಿಂದ ನಿಶ್ಚಿತಾರ್ಥ ನೆರವೇರಿತ್ತು….