ಕಡಪ (ಆಂಧ್ರಪ್ರದೇಶ): ಸುಂದರ ಜೀವನದ ಕನಸು ಕಾಣುತ್ತಾ ಮದುವೆಗೆ ಸಜ್ಜಾಗಿದ್ದ ಯುವತಿಯೊಬ್ಬಳು, ಭಾವಿ ಪತಿಯ ಮಾನಸಿಕ ಕಿರುಕುಳ ಹಾಗೂ ಆತನ ಹಾದಿತಪ್ಪಿದ ನಡವಳಿಕೆಯಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉನ್ನತ ಶಿಕ್ಷಣ ಪಡೆದ ಯುವತಿಯೇ ಸಾವಿನ ಹಾದಿ ಹಿಡಿದಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ. ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರಾದ ರೆಹಾನಾ ಎಂಬ ಯುವತಿ ಎಂ.ಎಸ್ಸಿ (M.Sc) ಪದವೀಧರೆಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಇವರಿಗೂ ಮತ್ತು ಶಹಜಹಾನ್ ಎಂಬ ಯುವಕನಿಗೂ ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು….
ಹೈದರಾಬಾದ್: ಸೈಬರ್ ಅಪರಾಧಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಹೈದರಾಬಾದ್ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆ ‘ಆಪರೇಷನ್ ಆಕ್ಟೋಪಸ್ 2.0’ ಭರ್ಜರಿ ಯಶಸ್ಸು ಕಂಡಿದೆ. ವಂಚಕರಿಗೆ ಅಕ್ರಮವಾಗಿ ಸಾಥ್ ನೀಡುತ್ತಿದ್ದ ವಿವಿಧ ಪ್ರಮುಖ ಬ್ಯಾಂಕುಗಳ 32 ಅಧಿಕಾರಿಗಳು ಸೇರಿದಂತೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಮಾಹಿತಿ ನೀಡಿದ್ದಾರೆ. 9 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ: ಕಳೆದ ಏಳು ದಿನಗಳಿಂದ ಹದಿನಾರು ವಿಶೇಷ ಪೊಲೀಸ್ ತಂಡಗಳು ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು…