ಬೆಂಗಳೂರು: ರಾಜ್ಯ ರಾಜಧಾನಿಯ ಅತ್ಯಂತ ಪ್ರಮುಖ ಕೈಗಾರಿಕಾ ಹಬ್‌ಗಳಲ್ಲಿ ಒಂದಾದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ – ಜಿಗಣಿ ಲಿಂಕ್ ರಸ್ತೆಯ ದುಸ್ಥಿತಿ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘ಬ್ರಾಂಡ್ ಬೆಂಗಳೂರು’ ಘೋಷಣೆಯ ನಡುವೆಯೇ, ಕೇವಲ 7 ಕಿಲೋಮೀಟರ್ ಉದ್ದದ ಈ ಪ್ರಮುಖ ರಸ್ತೆಯಲ್ಲಿ 350ಕ್ಕೂ ಹೆಚ್ಚು ಅಪಾಯಕಾರಿ ಗುಂಡಿಗಳು ಬಾಯಿತೆರೆದಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕಾ ನೌಕರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. 1,000ಕ್ಕೂ ಹೆಚ್ಚು ಉದ್ಯಮಗಳಿಗೆ ಕಂಟಕ: ಬಯೋಕಾನ್, ಸಿಪ್ಲಾ, ಮೈಕ್ರೋಲ್ಯಾಬ್ಸ್, ಹಾಗೂ ಎಚ್‌ಸಿಎಲ್ ಟೆಕ್ನಾಲಜೀಸ್‌ನಂತಹ…
ಚಿತ್ರದುರ್ಗ: ನವಿಲೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಅದನ್ನು ತಿನ್ನಲು ಹೋದ ಚಿರತೆಯೂ ವಿದ್ಯುತ್ ಅವಘಡಕ್ಕೆ ಬಲಿಯಾಗಿ ಟ್ರಾನ್ಸ್‌ಫಾರ್ಮರ್ ಮೇಲೆಯೇ ಮೃತಪಟ್ಟಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ನಡೆದಿದೆ. ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ವ್ಯವಸ್ಥೆಗೆ ಅಳವಡಿಸಲಾಗಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶದಿಂದ ನವಿಲು ಮೃತಪಟ್ಟಿದೆ ಎನ್ನಲಾಗಿದ್ದು, ಅದರ ಮೃತದೇಹವನ್ನು ತಿನ್ನಲು ಅಥವಾ ಎತ್ತಿಕೊಂಡು ಹೋಗಲು ಪ್ರಯತ್ನಿಸಿದ ವೇಳೆ ಚಿರತೆ ಕೂಡ ವಿದ್ಯುತ್ ಪ್ರವಾಹಕ್ಕೆ ಸಿಲುಕಿದೆ…