ಮನೆಯಲ್ಲಿ ಜೂಜಾಟ ಆಡಿಸುತ್ತಿದ್ದ ಕಾಂಗ್ರೆಸ್ ಮುಖಂಡ – ಪೊಲೀಸ್ ರ ದಾಳಿ ವಿಜಯಪುರ – ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡನ ಮನೆಯಲ್ಲೇ ಇಸ್ಪೀಟ್ ಆಡುತ್ತಿದ್ದಾಗ ಪೊಲೀಸ್ ದಾಳಿ. ಸೌದಾಗಾರ ಓಣಿಯಲ್ಲಿರುವ ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಹಮ್ಮದ ಸಾದಿಕ ಫರೀದಸಾಬ ಸುಂಬಡ ಅವರ ಮನೆಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಆಲಮೇಲ ಪೊಲೀಸ್ ಠಾಣೆಯ ಪಿಎಸ್‌ಐ ಪೊಲೀಸ್ ಹಠಾತ್ ದಾಳಿ ನಡೆಸಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ…
ಬೆಂಗಳೂರು: ನಗರದ ಸಿ.ಎ.ಆರ್ (CAR) ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ವಾರದ ಕವಾಯತ್ತಿನಲ್ಲಿ ಮಾನ್ಯ ಉಪ-ಪೊಲೀಸ್ ಆಯುಕ್ತರಾದ ಶ್ರೀಮತಿ ಶಾಲೂ, ಐಪಿಎಸ್ ಅವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರಲ್ಲದೆ, ಪರೇಡ್ ಪರಿವೀಕ್ಷಣೆ ನಡೆಸಿದರು. ಕವಾಯತ್ತಿನಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶಿಸ್ತು, ಸನ್ನದ್ಧತೆ ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ಉಪ-ಪೊಲೀಸ್ ಆಯುಕ್ತರು, ಇಲಾಖೆಯ ಕರ್ತವ್ಯದಕ್ಷತೆಯನ್ನು ಶ್ಲಾಘಿಸಿದರು. ವಿಶ್ವಾಸಾರ್ಹತೆ ಕಾಪಾಡುವುದು: ಪೊಲೀಸ್ ಇಲಾಖೆಯ ಗೌರವ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು….