ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿ ಟ್ಯಾಂಕರ್‌ಗೆ ಭೀಕರವಾಗಿ ಡಿಕ್ಕ ಹೊಡೆದ ಪರಿಣಾಮ, ಕಾರು ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ನೆಲಮಂಗಲ ತಾಲ್ಲೂಕಿನ ಯಂಟಗಾನಹಳ್ಳಿ ಬಳಿ ಸಂಭವಿಸಿದೆ. ಯಡಿಯೂರಿನ ದೊಡ್ಡಮಧುರೆ ಗ್ರಾಮದ ನಿವಾಸಿ ದರ್ಶನ್ (25) ಮೃತಪಟ್ಟ ದುರದೃಷ್ಟಕರ ಚಾಲಕ. ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ರಸ್ತೆ ಬದಿ ವಾಹನಗಳ…
ಚಿತ್ರದುರ್ಗ: ಮದುವೆಯಾದ ಸಂಭ್ರಮದ ದಿನವೇ ನವವಿವಾಹಿತೆಯೊಬ್ಬಳು ದಾರುಣವಾಗಿ ಕೊಲೆಯಾದ ಭೀಕರ ಘಟನೆಗೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ತಿರುವು ಸಿಕ್ಕಿದ್ದು, ಗಂಡನ ಸ್ನೇಹಿತರೇ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಎನ್. ಮಹದೇವಪುರ ಬಳಿ ಈ ಘಟನೆ ನಡೆದಿದ್ದು, 20 ವರ್ಷದ ಸುಮಲತ ಕೊಲೆಯಾದ ದುರದೃಷ್ಟಕರ ನವವಿವಾಹಿತೆ. ಮದುವೆಯಾದ ದಿನವೇ ಈಕೆಯ ಮೇಲೆ ಗಂಡನ ಸ್ನೇಹಿತರು ಅತ್ಯಾಚಾರ ಎಸಗಿ, ಬಳಿಕ ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯ ಎಸಗಿದ…