ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News
ಬೆಂಗಳೂರು: ವೃಷಭಾವತಿ ನದಿಯಲ್ಲಿ ಕಂತೆಕಂತೆ ನೋಟುಗಳು ತೇಲಿ ಬಂದಿದ್ದು, ಅದನ್ನು ನಿಜವಾದ ಹಣವೆಂದು ಭಾವಿಸಿ ಸ್ಥಳೀಯರು ಅಚ್ಚರಿಯಿಂದ ನೋಡಲು ಮುಗಿಬಿದ್ದ ಘಟನೆ ನಡೆದಿದೆ. ಆದರೆ, ಪರಿಶೀಲನೆಯ ನಂತರ ಅವು ಆಟಿಕೆ ನೋಟುಗಳು ಎಂಬ ಸತ್ಯ ಬಯಲಾಗಿದೆ. ನದಿಯಲ್ಲಿ ಕಂತೆಕಂತೆ ನೋಟುಗಳು ಕಂಡುಬಂದ ತಕ್ಷಣ, ಅಪಾರ ಪ್ರಮಾಣದ ನಿಜವಾದ ಹಣ ಇರಬಹುದೆಂದು ಭಾವಿಸಿದ ಸಾರ್ವಜನಿಕರು ಕುತೂಹಲದಿಂದ ಸ್ಥಳಕ್ಕೆ ಧಾವಿಸಿದರು. ವಿಷಯ ತಿಳಿದ ಕೂಡಲೇ ಬಿಡದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಪ್ರಾಜೆಕ್ಟ್…
ದೊಡ್ಡಬಳ್ಳಾಪುರ: ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸದೆ, ಬಿಡುಗಡೆಯಾಗಿದ್ದ 17.50 ಲಕ್ಷ ರೂಪಾಯಿ ಹಣ ಬಿಲ್ ಮಾಡಿಕೊಂಡು ಕಂಟ್ರಾಕ್ಟರ್‌ಗಳು ಪರಾರಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಯುವಕರು ಗಂಭೀರ ಆರೋಪ ಮಾಡಿದ್ದಾರೆ. ತಾಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮೂರ್ನಾಲ್ಕು ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರ, ಬೆಂ.ಗ್ರಾ. ಜಿಲ್ಲಾ ಪಂಚಾಯಿತಿ ಹಾಗೂ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ…