Skip to main content

Police Roundup

ವೃಷಭಾವತಿ ನದಿಯಲ್ಲಿ ಕಂತೆಕಂತೆ ನೋಟು ಪ್ರತ್ಯಕ್ಷ: ನಿಜವಾದ ಹಣವೆಂದು ಮುಗಿಬಿದ್ದ ಜನರಿಗೆ ಕಾದಿತ್ತು ಶಾಕ್!

Share News

ಬೆಂಗಳೂರು: ವೃಷಭಾವತಿ ನದಿಯಲ್ಲಿ ಕಂತೆಕಂತೆ ನೋಟುಗಳು ತೇಲಿ ಬಂದಿದ್ದು, ಅದನ್ನು ನಿಜವಾದ ಹಣವೆಂದು ಭಾವಿಸಿ ಸ್ಥಳೀಯರು ಅಚ್ಚರಿಯಿಂದ ನೋಡಲು ಮುಗಿಬಿದ್ದ ಘಟನೆ ನಡೆದಿದೆ. ಆದರೆ, ಪರಿಶೀಲನೆಯ ನಂತರ ಅವು ಆಟಿಕೆ ನೋಟುಗಳು ಎಂಬ ಸತ್ಯ ಬಯಲಾಗಿದೆ.

 

​ನದಿಯಲ್ಲಿ ಕಂತೆಕಂತೆ ನೋಟುಗಳು ಕಂಡುಬಂದ ತಕ್ಷಣ, ಅಪಾರ ಪ್ರಮಾಣದ ನಿಜವಾದ ಹಣ ಇರಬಹುದೆಂದು ಭಾವಿಸಿದ ಸಾರ್ವಜನಿಕರು ಕುತೂಹಲದಿಂದ ಸ್ಥಳಕ್ಕೆ ಧಾವಿಸಿದರು. ವಿಷಯ ತಿಳಿದ ಕೂಡಲೇ ಬಿಡದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

​ಶಾಲಾ ಪ್ರಾಜೆಕ್ಟ್ ನೋಟು ಬಳಸಿ ಪುಂಡರ ಆಟ?

ನದಿಯಲ್ಲಿದ್ದ ನೋಟುಗಳನ್ನು ಮೇಲಕ್ಕೆತ್ತಿ ಪರಿಶೀಲಿಸಿದಾಗ, ಅವುಗಳ ಮೇಲೆ ‘CHILDREN BANK OF INDIA’ ಎಂದು ನಮೂದಾಗಿರುವುದು ಕಂಡುಬಂದಿದೆ. ಇವು ಮಕ್ಕಳು ಶಾಲಾ ಪ್ರಾಜೆಕ್ಟ್‌ಗಳಿಗೆ ಬಳಸುವ ಆಟಿಕೆ ನೋಟುಗಳು ಎಂಬುದು ದೃಢಪಟ್ಟಿದೆ.

 

​ಯಾರೋ ಕಿಡಿಗೇಡಿಗಳು ಶಾಲಾ ಪ್ರಾಜೆಕ್ಟ್‌ಗಾಗಿ ಬಳಸುವ ಈ ನಕಲಿ ನೋಟುಗಳನ್ನು ನದಿಗೆ ಎಸೆದು ಹುಡುಗಾಟಿಕೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಕುತೂಹಲ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin