ಹೈದರಾಬಾದ್: ಕಮಿಷನ್ ಆಸೆ ತೋರಿಸಿ ವಿದ್ಯಾರ್ಥಿಗಳು ಹಾಗೂ ಡೆಲಿವರಿ ಸಿಬ್ಬಂದಿಯಿಂದ ಬ್ಯಾಂಕ್ ಖಾತೆ ಹಾಗೂ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿ ಸೈಬರ್ ಅಪರಾಧಿಗಳಿಗೆ ಪೂರೈಸುತ್ತಿದ್ದ ಕುಖ್ಯಾತ ಜಾಲವೊಂದನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕರ್ನಾಟಕದ ಬೀದರ್ ಮೂಲದ ಇಬ್ಬರನ್ನು ಬಂಧಿಸಲಾಗಿದೆ. ಬೀದರ್ ಜಿಲ್ಲೆಯ ಮೂಲದ ಗುಮ್ಮ ರಮೇಶ್ (39) ಹಾಗೂ ಮುದಲೆ ಅನಿಲ್ (19) ಬಂಧಿತ ಆರೋಪಿಗಳಾಗಿದ್ದು, ಇಬ್ಬರೂ ಹೈದರಾಬಾದ್‌ನ ರಾಮಂತಪುರದಲ್ಲಿ ನೆಲೆಸಿದ್ದರು. ಅಕ್ಟೋಬರ್ 8ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಇವರನ್ನು ಬಂಧಿಸಿ,…
ಹೊಸಕೋಟೆ: ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶವಾದ ಕೆಇಬಿ ವೃತ್ತದ ಬಳಿ ಇರುವ ‘ದುರ್ಗಾ ಮೊಬೈಲ್’ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಗ್ಯಾಸ್ ಕಟ್ಟರ್ ಬಳಸಿ ಕೃತ್ಯ: ಖದೀಮರು ರಾತ್ರಿ ವೇಳೆ ಅಂಗಡಿಯ ರೋಲಿಂಗ್ ಶೆಲ್ಟರ್‌ಅನ್ನು (Rolling Shutter) ಗ್ಯಾಸ್ ಕಟ್ಟರ್ ಬಳಸಿ ನಿಖರವಾಗಿ ಕತ್ತರಿಸಿ ಒಳ ನುಗ್ಗಿದ್ದಾರೆ. ಬಳಿಕ ಅಂಗಡಿಯೊಳಗೆ ಭದ್ರವಾಗಿ ಇರಿಸಲಾಗಿದ್ದ ವಿವಿಧ ಕಂಪನಿಗಳ ಸುಮಾರು 25ಕ್ಕೂ ಹೆಚ್ಚಿನ ಹೈ-ಎಂಡ್ ಮೊಬೈಲ್…