Police Roundup

ಅಕ್ರಮ ಗೋಹತ್ಯೆಕೋರರಿಗೆ ಬಂಟ್ವಾಳ ಪೊಲೀಸರ ಶಾಕ್: ಕೃತ್ಯ ನಡೆದ ಕೊಟ್ಟಿಗೆ, ಮನೆ ಮುಟ್ಟುಗೋಲು!

Share News

ಬಂಟ್ವಾಳ: ತಾಲೂಕಿನಲ್ಲಿ ನಡೆದ ಅಕ್ರಮ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಕಾನೂನು ಕುಣಿಕೆ ಬಿಗಿಗೊಳಿಸಿದ್ದು, ಕೃತ್ಯ ನಡೆದ ಸ್ಥಳವಾದ ಆರೋಪಿಯ ಮನೆ ಹಾಗೂ ದನದ ಕೊಟ್ಟಿಗೆಯನ್ನು ಅಧಿಕೃತವಾಗಿ ಜಪ್ತಿ ಮಾಡಿದ್ದಾರೆ.

​ಬಂಟ್ವಾಳ ತಾಲೂಕಿನ ಸಜೀಪ ಮೂಡಾ ಗ್ರಾಮದ ಕೊಳಕೆ ಪಂಜಾಜೆ ಪ್ರದೇಶದಲ್ಲಿ ಈ ಮಹತ್ವದ ಕಾನೂನು ಕ್ರಮ ಜರುಗಿಸಲಾಗಿದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಕ್ರಮಾಂಕ 68/2026ರ ಪ್ರಕರಣದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4, 7 ಹಾಗೂ 12ರಡಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿತ್ತು.

​ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಕೃತ್ಯ ಎಸಗಲಾದ ಸ್ಥಳವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ, ಸಜೀಪ ಮೂಡಾ ಗ್ರಾಮದ ಕೊಳಕೆ ಪಂಜಾಜೆ ನಿವಾಸಿ, ಆರೋಪಿ ಮುಸ್ತಫಾ ಬಾಬು ಎಂಬಾತನಿಗೆ ಸೇರಿದ ವಾಸದ ಮನೆ ಹಾಗೂ ದನದ ಕೊಟ್ಟಿಗೆಯನ್ನು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ರ ಕಲಂ 8(1)ರ ಅನ್ವಯ ಪೊಲೀಸರು ವಶಕ್ಕೆ ಪಡೆದು ಸೀಲ್ ಮಾಡಿದ್ದಾರೆ.

 

ಸ್ಥಳದಲ್ಲಿ ಜಪ್ತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿರುವ ಬಂಟ್ವಾಳ ನಗರ ಪೊಲೀಸರು, ಮುಂದಿನ ಕಾನೂನಾತ್ಮಕ ಆಸ್ತಿ ಮುಟ್ಟುಗೋಲು ಕ್ರಮಗಳಿಗಾಗಿ ಮಂಗಳೂರು ಉಪವಿಭಾಗದ ಮಾನ್ಯ ಉಪ ವಿಭಾಗೀಯ ದಂಡಾಧಿಕಾರಿಗಳಿಗೆ (ಎಸಿ) ಅಧಿಕೃತ ವರದಿ ಸಲ್ಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

​ಗೋಹತ್ಯೆ ತಡೆ ಕಾಯ್ದೆಯಡಿ ಆರೋಪಿಯ ಆಸ್ತಿಯನ್ನೇ ಜಪ್ತಿ ಮಾಡಿರುವುದು ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಿದಂತಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin