Skip to main content

Police Roundup

‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ಯಿಂದ ಸಾಂಸ್ಕೃತಿಕ ಸಿಂಚನ ಹಾಗೂ ಪ್ರಶಸ್ತಿ ಪ್ರದಾನ – ಸಾಧಕರ ಗೌರವಕ್ಕೆ ಡಾ.ಕೆ.ಎಸ್.ರಾಜಣ್ಣ ಶ್ಲಾಘನೆ

Share News

ಬೆಂಗಳೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ.ಎಸ್. ರಾಜಣ್ಣ ಹೇಳಿದರು.

 

​ನಗರದ ನಯನ ಸಭಾಂಗಣದಲ್ಲಿ ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ ಹಾಗೂ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್’ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ 24 ನೇ ‘ಸಾಂಸ್ಕೃತಿಕ ಸಿಂಚನ ಮತ್ತು ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

​ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವದ್ದು:

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, “ಶಿಕ್ಷಕರು ಸಮಾಜವನ್ನು ತಿದ್ದಿ ತೀಡುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದ್ದು, ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ” ಎಂದರು.

 

​ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಪತ್ರಕರ್ತ ಗಂಡಸಿ ಸದಾನಂದಸ್ವಾಮಿ, ಗಣೇಶ್ ರಾವ್ ಕೇಸರಸ್ಕರ್, ಹಿರಿಯ ಗಾಯಕ ಶಶಿಧರ್ ಕೋಟೆ, ಸರಿಗಮಪ ಜ್ಯೂರಿ ಸದಸ್ಯ ಸಚಿನ್ ಎಸ್. ನರ್ಗಾತ, ‘ನಮ್ಮ ಸೂಪರ್ ಸ್ಟಾರ್’ ಸಂಪಾದಕ ಎಚ್.ಕೆ. ಮೊಹ್ಮದ್ ಅಸ್ಲಮ್, ವಸ್ತ್ರ ವಿನ್ಯಾಸಕಿ ಲಕ್ಷ್ಮೀ ಕೃಷ್ಣ, ಸಂಜೀವಿನಿ ರೇಖಿ ಹೀಲಿಂಗ್ ಸೆಂಟರ್ ಅಧ್ಯಕ್ಷೆ ಡಾ. ವಿ. ಭರಣಿರಾಜು, ಶ್ರೀಸಾಯಿ ಶಂಕರ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥಾಪಕಿ ದೀಪಾ ಲಕ್ಷ್ಮೀ ಎಸ್. ಹಾಗೂ ಇವೆಂಟ್ ಕೋ-ಆರ್ಡಿನೇಟರ್ ಚಂದ್ರಿಕಾ ಬಿ.ವಿ. ಉಪಸ್ಥಿತರಿದ್ದರು. ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಪಾಲ್ಗೊಂಡಿದ್ದರು.

 

​ಸಾಧಕರಿಗೆ ಪ್ರಶಸ್ತಿ ಪ್ರದಾನ:

ಕಾರ್ಯಕ್ರಮದಲ್ಲಿ ಡಾ. ಚಿಕ್ಕಹೆಜ್ಜಾಜಿ ಮಹದೇವ್, ಎಸ್. ನಂಜುಂಡ, ಎಸ್. ಸವಿತಾ, ಟಿ.ಆರ್. ಚೂಡಾಮಣಿ, ಜಯಚಿತ್ರ, ಪವಿತ್ರಾ ಎಂ.ಆರ್, ಸುಮಾ ಎಂ, ಅಂಜನಾ ಲಮ, ಸಂಧ್ಯಾಪ್ರಿಯ ಜಿ, ಅರ್ಪಣ ಕುಮಾರಿ, ಅರ್ಚನ ಎಂ.ಎನ್, ರೇಷ್ಮಾ, ರೂಪಾ ಎನ್, ರೀಟಾ ವಿ, ರಮ್ಯಾ ಜಿ, ಅಭಿನಯ ಎಂ, ಜ್ಯೋತಿ ಭಿಡೆ ಆರ್, ಸುಮೇರಾ ಅಮನ್, ವೆಂಕಟೇಶ ಮೂರ್ತಿ ಎಸ್.ವಿ, ಮಂಚೇನಹಳ್ಳಿ ಪ್ರಕಾಶ್ ಎನ್. ಜಿಂಗಾಡೆ, ರೂಪಾ ಕೆ, ಭವಾನಿ ಆರ್, ಕುಮಾರ ತೇಜಸ್ ಎಸ್, ಕೃತಿಕಾ ಆರ್ ಹಾಗೂ ಕುಮಾರಿ ಸೌಜನ್ಯ ವಿ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin