ಮೈಸೂರು: ಇಲ್ಲಿನ ದಟ್ಟಗಳ್ಳಿಯ ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವಳಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಯಾವುದೇ ಅಧಿಕೃತ ಲೈಸೆನ್ಸ್ (ಪರವಾನಗಿ) ಇಲ್ಲದೆಯೇ ಈ ಪಬ್ ಅನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಬ್ ಮಾಲೀಕನ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ಸಮಗ್ರ ತನಿಖೆ ಪ್ರಗತಿಯಲ್ಲಿದೆ. ಮತ್ತೊಂದೆಡೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತ (ಡಿಸಿ) ನಾಗರಾಜಪ್ಪ ಅವರನ್ನು ಅಮಾನತುಗೊಳಿಸಲು ಉನ್ನತ ಮಟ್ಟದ ಶಿಫಾರಸು ಮಾಡಲಾಗಿದೆ….
ದೊಡ್ಡಬಳ್ಳಾಪುರ: ಇಲ್ಲಿನ ನೇರಳಘಟ್ಟ ಕಾಲೋನಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನ ಹಲ್ಲೆಗೆ ಒಳಗಾಗಿದ್ದ ಮಾವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ನೇರಳಘಟ್ಟ ಕಾಲೋನಿ ನಿವಾಸಿ ನರಸಪ್ಪ (61) ಕೊಲೆಯಾದ ದುರ್ದೈವಿ. ಹಲ್ಲೆ ನಡೆಸಿದ ಆರೋಪಿಯನ್ನು ಅಳಿಯ ಲಕ್ಷ್ಮಣ (40) ಎಂದು ಗುರುತಿಸಲಾಗಿದೆ. ಜೂನ್ 14ರಂದು ನರಸಪ್ಪ ಅವರು ಯಾವುದೋ ಕ್ಷುಲ್ಲಕ ಕಾರಣಕ್ಕೆ ತಮ್ಮ ಮಗಳೊಂದಿಗೆ (ಲಕ್ಷ್ಮಣನ ಪತ್ನಿ) ಜಗಳ ತೆಗೆದು, ಆಕೆಯ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಕೋಪಗೊಂಡ ಅಳಿಯ…