ಬೆಳಗಾವಿ: ಪ್ರೀತಿಗಾಗಿ ಒಂದಾಗಬೇಕಿದ್ದ ಪ್ರೇಮಿಗಳ ಕಣ್ಣೀರ ಕಥೆ ಕೊನೆಗೂ ಮಹಾ ದುರಂತದಲ್ಲಿ ಅಂತ್ಯಗೊಂಡಿದೆ. ತನ್ನ ಪ್ರಾಣದಂತಿದ್ದ ಪ್ರಿಯತಮೆಯನ್ನು ಹೆತ್ತವರೇ ಮರ್ಯಾದಾ ಹತ್ಯೆ ಮಾಡಿದ ನೋವು ತಾಳಲಾರದೆ, ಪ್ರಿಯತಮ ಆಕೆಯ ಜನ್ಮದಿನದಂದೇ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಕೇತರ ಗ್ರಾಮದಲ್ಲಿ ನಡೆದಿದೆ. ನದಿಗುಡಕೇತರ ಗ್ರಾಮದ ಕೃಷ್ಣಾ ಸಹದೇವ ಪಾಟೀಲ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸತ್ತೆವ್ವಾ ಸಂತೋಷ ಹೆಳವಿ ಎಂಬಾಕೆಯ ಹುಟ್ಟುಹಬ್ಬದ ದಿನವೇ ಈತ…
ನಾಗ್ಪುರ: ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಪ್ರೇಮಿಗಳ ಕಥೆಯನ್ನು ಕೇಳಿರುತ್ತೀರಿ, ಆದರೆ ಮಹಾರಾಷ್ಟ್ರದ ನಾಗ್ಪುರದಲ್ಲಿ ತಮ್ಮ ಗೆಳತಿಯರಿಗೆ ಐಫೋನ್ ಗಿಫ್ಟ್ ನೀಡಲು ಇಬ್ಬರು ರೋಮಿಯೋಗಳು ಮಾಡಿರುವ ವಿಲಕ್ಷಣ ಕಳ್ಳತನದ ಕಥೆ ಕೇಳಿದರೆ ನೀವೂ ದಂಗಾಗುತ್ತೀರಿ! ಬರೋಬ್ಬರಿ 6.5 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ನಲ್ಲಿಗಳನ್ನು (Luxury Taps) ಕದ್ದ ಕಳ್ಳರು, ವಿಚಾರಣೆ ವೇಳೆ ನೀಡಿರುವ ಟ್ವಿಸ್ಟ್ ಕೇಳಿ ಪೊಲೀಸರೇ ತಲೆ ಕೆರೆದುಕೊಳ್ಳುವಂತಾಗಿದೆ. ನಾಗ್ಪುರದ ಪ್ರಸಿದ್ಧ ‘ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಟೈಲ್ಸ್ ಹಾಗೂ…