ಬೆಂಗಳೂರು: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಹೆಸರಲ್ಲೇ ನಕಲಿ ದಾಖಲೆ ಹಾಗೂ ಮುದ್ರೆ ಸೃಷ್ಟಿಸಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕರಡುಗಟ್ಟಿದ ಅಪರಾಧಿಯೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ರಾಜಾರೋಷವಾಗಿ ಬಿಡುಗಡೆಯಾಗಿ ಪರಾರಿಯಾಗಿರುವ ಆಘಾತಕಾರಿ ಹಗರಣ ಬೆಳಕಿಗೆ ಬಂದಿದೆ. ಕಿಡ್ನ್ಯಾಪ್ ಮತ್ತು ದರೋಡೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಶಂಕರ್ ಎ ತಂದೆ ಆರ್ಮುಗಂ (ಶಿಕ್ಷಾ ಬಂದಿ ಸಂಖ್ಯೆ: 12503) ಎಂಬಾತನೇ ಜೈಲಾಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ನಕಲಿ ಆದೇಶದ ಮೂಲಕ ಜೈಲಿನಿಂದ ಹೊರನಡೆದ ಖದೀಮ. ಪ್ರಸ್ತುತ…
ನವದೆಹಲಿ: ಕರ್ನಾಟಕ ಕೇಡರ್‌ನ ದಕ್ಷ ಹಾಗೂ ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ (Sonia Narang) ಅವರ ಕೇಂದ್ರ ನಿಯೋಜನೆ (Central Deputation) ಅವಧಿಯನ್ನು ಕೇಂದ್ರ ಸರ್ಕಾರವು ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ. ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯಲ್ಲಿ ಇನ್ಸ್‌ಪೆಕ್ಟರ್ ಜನರಲ್ (IG) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸೋನಿಯಾ ನಾರಂಗ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಪ್ರಧಾನಿ ನರೇಂದ್ರ…