ಅಹಮದಾಬಾದ್:ಪ್ರಿಯತಮನೊಂದಿಗೆ ಹೊಸ ಜೀವನ ಆರಂಭಿಸುವ ಆಸೆಗೆ ಬಿದ್ದ ಮಹಿಳೆಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಆಭರಣ ಮಳಿಗೆಯಿಂದಲೇ ಬರೋಬ್ಬರಿ ೧.೬೬ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆಘಾತಕಾರಿ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಾಗೂ ಕ್ರೈಂ ಬ್ರಾಂಚ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ ಮಹಿಳಾ ಉದ್ಯೋಗಿ ಹಾಗೂ ಆಕೆಗೆ ವಂಚಿಸಿ ಪರಾರಿಯಾಗಿದ್ದ ಆಕೆಯ ಪ್ರಿಯತಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯೂ ನರೋಡಾ ನಿವಾಸಿ ಹರ್ಷಿದಾ…
ಪ್ರಸ್ತುತ ಸೋಷಿಯಲ್ ಮೀಡಿಯಾ ಯುಗದಲ್ಲಿ ಕೇವಲ ಸೌಂಡ್ ಮತ್ತು ಸೆನ್ಸೇಷನಲ್ ಸುದ್ದಿಗಳ ಬೆನ್ನಟ್ಟುವ ಮಾಧ್ಯಮಗಳ ನಡುವೆ, ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಡಿಜಿಟಲ್ ಮಾಧ್ಯಮದ ಮೂಲಕ ಜಗತ್ತಿನಾದ್ಯಂತ ಪಸರಿಸುತ್ತಿರುವ ಹೆಮ್ಮೆಯ ಯೂಟ್ಯೂಬ್ ಚಾನೆಲ್ ಹಾಗೂ ಸಾಂಸ್ಕೃತಿಕ ವೇದಿಕೆ ‘ಇದು ನಿಮ್ಮ ವಾಹಿನಿ’ (Idhu Nimma Vahini) ಅತ್ಯಂತ ವಿಶಿಷ್ಟವಾಗಿ ಮೂಡಿಬಂದಿದೆ. ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಕಲಾರಸಿಕರ ಮನಗೆಲ್ಲುವ ಗುಣಮಟ್ಟದ ಕಂಟೆಂಟ್ ನೀಡುವ ಮೂಲಕ ಈ ಚಾನೆಲ್ ಇಂದು ಕನ್ನಡಿಗರ ನೆಚ್ಚಿನ ಡಿಜಿಟಲ್ ಕನ್ನಡಿಯಾಗಿ…