ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ೯ ಕೋಟಿ ರೂಪಾಯಿ ನಗದನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಜಪ್ತಿ ಮಾಡಿದ್ದಾರೆ. ಆಗಸ್ಟ್ ೧೮ರಂದು ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಸಿಗ್ನಲ್ ಬಳಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಂದ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಂಶಯಾಸ್ಪದ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಭಾರಿ ಪ್ರಮಾಣದ ಹಣ ಪತ್ತೆಯಾಗಿದೆ. ಸದರಿ ನಗದು ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು ಚಾಲಕ ಹಾಗೂ…
ಬೆಂಗಳೂರು: ವೃಷಭಾವತಿ ನದಿಯಲ್ಲಿ ಕಂತೆಕಂತೆ ನೋಟುಗಳು ತೇಲಿ ಬಂದಿದ್ದು, ಅದನ್ನು ನಿಜವಾದ ಹಣವೆಂದು ಭಾವಿಸಿ ಸ್ಥಳೀಯರು ಅಚ್ಚರಿಯಿಂದ ನೋಡಲು ಮುಗಿಬಿದ್ದ ಘಟನೆ ನಡೆದಿದೆ. ಆದರೆ, ಪರಿಶೀಲನೆಯ ನಂತರ ಅವು ಆಟಿಕೆ ನೋಟುಗಳು ಎಂಬ ಸತ್ಯ ಬಯಲಾಗಿದೆ. ನದಿಯಲ್ಲಿ ಕಂತೆಕಂತೆ ನೋಟುಗಳು ಕಂಡುಬಂದ ತಕ್ಷಣ, ಅಪಾರ ಪ್ರಮಾಣದ ನಿಜವಾದ ಹಣ ಇರಬಹುದೆಂದು ಭಾವಿಸಿದ ಸಾರ್ವಜನಿಕರು ಕುತೂಹಲದಿಂದ ಸ್ಥಳಕ್ಕೆ ಧಾವಿಸಿದರು. ವಿಷಯ ತಿಳಿದ ಕೂಡಲೇ ಬಿಡದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಪ್ರಾಜೆಕ್ಟ್…