ಮಾದಕ ದ್ರವ್ಯ ಜಾಲದ ವಿರುದ್ಧ ಬೆಳಗಾವಿ ಸಿಸಿಬಿ (CCB) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೆರಾಯಿನ್ ಮಾರಾಟ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬರೋಬ್ಬರಿ 9.5 ಲಕ್ಷ ರೂಪಾಯಿ ಮೌಲ್ಯದ ಹೆರಾಯಿನ್ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿಯ ಗಂಗಾಧರ ನಗರದ ನಿವಾಸಿಯಾದ ರಾಘವೇಂದ್ರ ಮುರ್ಕಟನಾಳ (36) ಬಂಧಿತ ಆರೋಪಿಯಾಗಿದ್ದಾನೆ. ಮಂಗಳವಾರ ಸಿಸಿಬಿ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದೆ. ಜಪ್ತಿ ಮಾಡಲಾದ ಮಾದಕ ದ್ರವ್ಯ:…
ಬೆಂಗಳೂರು: ರಾಜಧಾನಿಯ ಕನಕಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಎದುರು ಅತ್ಯಂತ ಅಸಭ್ಯವಾಗಿ ಹಾಗೂ ವಿಕೃತಿಯಿಂದ ವರ್ತಿಸಿದ್ದಾನೆ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ, ಸ್ಯಾಂಡಲ್‌ವುಡ್ ನಟಿ ದಿವ್ಯಾ ಸುರೇಶ್ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗಾದ ಕಹಿ ಅನುಭವದ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ದಿವ್ಯಾ ಸುರೇಶ್ ಅವರು ತಮ್ಮ ಸಹೋದರಿಯ ಜೊತೆಗೂಡಿ ಕಾರಿನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ”ನಾನು ಮತ್ತು ನನ್ನ ಸಹೋದರಿ ಕಾರಿನಲ್ಲಿ…