ಅಮೆರಿಕದ ಸಂಸತ್ತಿನ (ಯು.ಎಸ್. ಕಾಂಗ್ರೆಸ್) ಇತಿಹಾಸದಲ್ಲಿ ಕರ್ನಾಟಕದ ನಾಯಕ, ಡಾ. ಯು. ಟಿ. ಖಾದರ್ ಫರೀದ್ ಅವರು ತಮ್ಮ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ದಾಖಲಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಾರ್ವಜನಿಕ ಸೇವೆ ಹಾಗೂ ದೂರದೃಷ್ಟಿಯ ನಾಯಕತ್ವದ ಸಾಧನೆಗಳನ್ನು ಗುರುತಿಸಿ, ಅಮೆರಿಕ ಸಂಸತ್ತಿನ ಪ್ರತಿಷ್ಠಿತ “ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್” (For the Congressional Record) ದಾಖಲೆಯನ್ನು ಗೌರವಪೂರ್ವಕವಾಗಿ ಪ್ರದಾನ ಮಾಡಲಾಗಿದೆ. ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್ಯಾಂಕಿಂಗ್ ಸದಸ್ಯ,…
ಹರಪನಹಳ್ಳಿ: ಹರಪನಹಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ (ಡಿವೈಎಸ್ಪಿ) ಡಾ. ಸಂತೋಷ ಚವ್ಹಾಣ, ಕೆ.ಎಸ್.ಪಿ.ಎಸ್. ರವರು ಚಿಗಟೇರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ಕೈಗೊಂಡರು. ಪರಿವೀಕ್ಷಣೆ ವೇಳೆ ಠಾಣೆಯಲ್ಲಿನ ವಿವಿಧ ದಾಖಲಾತಿಗಳ ನಿರ್ವಹಣೆ, ವಿವಿಧ ಪ್ರಕರಣಗಳಲ್ಲಿ ಜಪ್ತುಪಡಿಸಿಕೊಂಡಿರುವ ವಾಹನಗಳ ಸೂಕ್ತ ವಿಲೇವಾರಿ ಹಾಗೂ ಠಾಣಾ ಆವರಣದ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಪರಿಶೀಲಿಸಿದ ಅವರು, ಸ್ಥಳದಲ್ಲಿದ್ದ ಪಿ.ಎಸ್.ಐ. ಅವರಿಗೆ ಅಗತ್ಯ ನಿರ್ದೇಶನ ಹಾಗೂ ಸೂಕ್ತ ಸೂಚನೆಗಳನ್ನು ನೀಡಿದರು. ನಂತರ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ…