ಬೆಂಗಳೂರು: ನಗರದ ಪ್ರತಿಷ್ಠಿತ UB ಸಿಟಿಯಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಖ್ಯಾತ ‘ಸ್ಕೈ ಕಿಚನ್’ (Sky Kitchen) ರೆಸ್ಟೋರೆಂಟ್ಗೆ ಆರೋಗ್ಯ ಇಲಾಖೆ ಹಾಗೂ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸೀಲ್ ಮಾಡಿದ್ದಾರೆ.
ತಪಾಸಣೆಯ ವೇಳೆ ಕಿಚನ್ನಲ್ಲಿ ಅತೀವ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದ್ದು, ಆಹಾರ ತಯಾರಿಕೆಗೆ ಕೊಳೆತು ಹೋಗಿದ್ದ ಮತ್ತು ಹಾಳಾಗಿದ್ದ ಚಿಕನ್ ಹಾಗೂ ಮಟನ್ ಅನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದ್ದ ಈ ಗಂಭೀರ ಲೋಪವನ್ನು ಗಂಭೀರವಾಗಿ ಪರಿಗಣಿಸಿದ FSSAI ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ತಕ್ಷಣವೇ ರೆಸ್ಟೋರೆಂಟ್ ಅನ್ನು ಲಾಕ್ ಮಾಡಿ ಬೀಗ ಜಡಿದಿದ್ದಾರೆ.
ದಾಳಿಯ ವೇಳೆ ಲಭ್ಯವಾದ ಕಳಪೆ ಹಾಗೂ ಅಪಾಯಕಾರಿ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ರಾಜಧಾನಿಯ ಐಷಾರಾಮಿ ಮಾಲ್ನಲ್ಲಿರುವ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಇಂತಹ ಅಕ್ರಮ ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.