ದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ಲೋಕದಲ್ಲಿ ವಿಕೃತಿ ಮೆರೆಯುತ್ತಿದ್ದ ಭೀಕರ ಪ್ರಕರಣವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಾನು ಕಳುಹಿಸಿದ ಫ್ರೆಂಡ್ ರಿಕ್ವೆಸ್ಟ್ ಅನ್ನು ಮಹಿಳೆಯೊಬ್ಬರು ತಿರಸ್ಕರಿಸಿದ್ದಕ್ಕೆ, ತೀವ್ರ ಆಕ್ರೋಶಗೊಂಡು AI ತಂತ್ರಜ್ಞಾನದ (ಡೀಪ್‌ಫೇಕ್) ಮೂಲಕ ಆಕೆ ಮತ್ತು ಆಕೆಯ ತಾಯಿಯ ಅಶ್ಲೀಲ ಫೋಟೋ-ವಿಡಿಯೋಗಳನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಕಿರಾತಕನನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು 27 ವರ್ಷದ ಸುಮಿತ್ ನೆಮಚಂದ್ ಶರ್ಮಾ ಎಂದು ಗುರುತಿಸಲಾಗಿದೆ. ಅತ್ಯಂತ ಶಾಕಿಂಗ್ ಎಂದರೆ,…
ಕೋಯಮತ್ತೂರು: ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಖಾಸಗಿ ಬಸ್ಸೊಂದರಲ್ಲಿ ಯುವತಿಯೊಬ್ಬಳು ಚಾಲಕನ ಪಕ್ಕದ ಗೇರ್ ಬಾಕ್ಸ್ ಮೇಲೆ ಕುಳಿತು, ಆತನ ಗಮನ ತಪ್ಪಿಸುವಂತೆ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡಿದ ಚಾಲಕ ಹಾಗೂ ಯುವತಿಯ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ತಮಿಳುನಾಡಿನ ಕೋಯಮತ್ತೂರಿನ ಶಿವಾನಂದ ಕಾಲೋನಿಯಿಂದ ರಾಮನಾಥಪುರಂ ಮಾರ್ಗವಾಗಿ ಚಲಿಸುವ ರೂಟ್ ನಂಬರ್ 5ರ…