ದಶಕಗಳ ರಕ್ತಸಿಕ್ತ ಇತಿಹಾಸ, ಗ್ಯಾಂಗ್‌ವಾರ್ ಹಾಗೂ ರಿವೇಂಜ್ ಕಿಲ್ಲಿಂಗ್‌ಗೆ ಹೆಸರಾಗಿದ್ದ ಬೀಮಾತೀರದಲ್ಲಿ ಮತ್ತೆ ನೆತ್ತರಿನ ನದಿಯೇ ಹರಿದಿದೆ. ಇಷ್ಟು ದಿನ ಶಾಂತವಾಗಿದ್ದ ಗಡಿಭಾಗದಲ್ಲಿ ಭೀಕರ ರಕ್ತಪಾತ ಜರುಗಿದ್ದು, ಒಂದೇ ಕುಟುಂಬದ ಆರು ಜನರನ್ನು ಅಟ್ಟಾಡಿಸಿ, ಗುಂಡಿಕ್ಕಿ ಹಾಗೂ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಅತಿ ಅಮಾನುಷ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಹೊಲವೊಂದರಲ್ಲಿ ನಡೆದಿದೆ. ರಾಜಿ ಸಂಧಾನದ ನೆಪದಲ್ಲಿ ಬಂದೂಕು, ಮಚ್ಚುಗಳೊಂದಿಗೆ ಬಂದ ಎದುರಾಳಿಗಳು ನಡೆಸಿದ ಈ ರಣ ಭೀಕರ ಹತ್ಯಾಕಾಂಡಕ್ಕೆ…
ರಕ್ತಚರಿತ್ರೆ, ಗನ್ ಕಲ್ಚರ್ ಹಾಗೂ ದಶಕಗಳ ಭೀಕರ ಹಗೆತನಕ್ಕೆ ಸಾಕ್ಷಿಯಾಗಿದ್ದ ಬೀಮಾತೀರದಲ್ಲಿ ಸದ್ಯ ಶಾಂತಿ ನೆಲೆಸಿದೆ ಎನ್ನುವಷ್ಟರಲ್ಲೇ, ಭೂಗತ ಜಗತ್ತಿನಲ್ಲಿ ಹೊಸದೊಂದು ಹೆಸರಿನ ಅಬ್ಬರ ಜೋರಾಗಿ ಕೇಳಿಬರುತ್ತಿದೆ. ಹಳೇ ಡಾನ್‌ಗಳ ಸಾಮ್ರಾಜ್ಯ ಪತನಗೊಳ್ಳುತ್ತಿದ್ದಂತೆ, ಬೀಮಾ ನದಿಯ ಒಡಲಿನಲ್ಲಿ ತನ್ನದೇ ಆದ ಕರಾಳ ಪ್ರಭಾವ ಮೂಡಿಸಲು ಹೊಸ ಚಹರೆಯೊಂದು ಹವಣಿಸುತ್ತಿದೆ. ಆ ಹೆಸರೇ ಪಿಂಟ್ಯಾ ಅಗರ್ಖೇಡ್ ಅಲಿಯಾಸ್ ಪ್ರಕಾಶ್ ಮೇಲಿನಕೇರಿ. ಭೂಗತ ಲೋಕದಲ್ಲಿ ಸೃಷ್ಟಿಯಾಗಿರುವ ರಾಜಬೀದಿಗೆ ಲಗ್ಗೆ ಇಡಲು ಸಜ್ಜಾಗುತ್ತಿರುವ ಈ ಹೊಸ ಆಸಾಮಿಯ ಕುರಿತು ‘ಅರಕ್ಷಕರ ಟೈಮ್ಸ್…