ಕಾಕಿನಾಡ:ಇನ್‌ಸ್ಟಾಗ್ರಾಮ್‌ನಲ್ಲಿ ಕಂಡ ಅಡುಗೆ ವಿಡಿಯೋವೊಂದನ್ನು ಅನುಸರಿಸಿ ವಿಷಕಾರಿ ‘ಉಮ್ಮತ್ತಿ ಹೂವಿನ’ ಸಾರು ಸೇವಿಸಿದ ಒಂದೇ ಕುಟುಂಬದ ನಾಲ್ವರು ಸದಸ್ಯರು ಪ್ರಾಣಾಪಾಯಕ್ಕೆ ಸಿಲುಕಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಎರ್ಲಂಪಾಲೆಂ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ವೀರಲಕ್ಷ್ಮಿ, ಗಂಗಾಭವಾನಿ, ಜಯಲಕ್ಷ್ಮಿ ಮತ್ತು ವೀರಬ್ಬುಲು ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಅಡುಗೆಯ ವಿಡಿಯೋವೊಂದನ್ನು ವೀಕ್ಷಿಸಿದ್ದರು. ಆ ವಿಡಿಯೋದಲ್ಲಿ “ಉಮ್ಮತ್ತಿ ಹೂವನ್ನು (Datura Flower) ಬೇಳೆ ಸಾರಿನಲ್ಲಿ ಬಳಸಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ” ಎಂಬ ತಪ್ಪು ಮಾಹಿತಿಯನ್ನು ನೀಡಲಾಗಿತ್ತು. ಇದನ್ನು ನಿಜವೆಂದು ನಂಬಿದ ಕುಟುಂಬಸ್ಥರು,…
ಬಾಗಲಕೋಟೆ: ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಜಿಲ್ಲಾಸ್ಪತ್ರೆಯಲ್ಲೇ ಮಾನವೀಯತೆ ಮರೆತ ಘೋರ ಕೃತ್ಯವೊಂದು ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರನ ಆರೈಕೆಗೆ ಬಂದಿದ್ದ ಮಹಿಳೆಯ ಮೇಲೆ ಆಸ್ಪತ್ರೆಯ ಹೊರಗುತ್ತಿಗೆ ನೌಕರನೊಬ್ಬ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ವರದಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಸಹೋದರನ ಉಪಚಾರಕ್ಕಾಗಿ 34 ವರ್ಷದ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಫರೀದ್ ಸಾಬ್ ಡಾಂಗೆ ಎಂಬಾತ ಮಹಿಳೆಯ ಪರಿಚಯ ಮಾಡಿಕೊಂಡಿದ್ದನು….