ಬೆಂಗಳೂರು: ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು (Monsoon) ಈ ಬಾರಿ ನಿಗದಿತ ಸಮಯಕ್ಕಿಂತ ಒಂದು ವಾರ ಮೊದಲೇ ಅಂಡಮಾನ್ ದ್ವೀಪಗಳನ್ನು ಪ್ರವೇಶಿಸಲಿದೆ. ವಾಡಿಕೆಯಂತೆ ಮೇ 22ಕ್ಕೆ ಆರಂಭವಾಗಬೇಕಿದ್ದ ಮಳೆಗಾಲದ ಪ್ರಕ್ರಿಯೆ, ಈ ಬಾರಿ ಮೇ 17ರಂದೇ ಚಾಲನೆ ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಮುಂಗಾರು ಮಾರುತಗಳು ಈ ವಾರದ ಕೊನೆಯಲ್ಲಿ (ಮೇ 17) ಅಪ್ಪಳಿಸಲಿವೆ. ಇದು…
ಬೆಂಗಳೂರು: ಮನೆಯಲ್ಲಿ ಎಲೆಕ್ಟ್ರಿಕ್ ಬೈಕ್ ಚಾರ್ಜ್‌ಗೆ ಹಾಕಿದ್ದ ವೇಳೆ ಆಕಸ್ಮಿಕವಾಗಿ ಬ್ಯಾಟರಿ ಸ್ಫೋಟಗೊಂಡು (Battery Blast), ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್‌ನಲ್ಲಿ ನಡೆದಿದೆ. ಮರ್ಸಿ ಟೌನ್ ನಿವಾಸಿ, ಆಟೋ ಚಾಲಕ ಲೂಥ್ ನಾಥನ್ (62) ಮೃತಪಟ್ಟ ದುರ್ದೈವಿ. ಲೂಥ್ ನಾಥನ್ ಅವರು ಎಂದಿನಂತೆ ತಮ್ಮ ಎಲೆಕ್ಟ್ರಿಕ್ ಬೈಕನ್ನು ಮನೆಯ ಗ್ರೌಂಡ್ ಫ್ಲೋರ್‌ನಲ್ಲಿ ಚಾರ್ಜ್‌ಗೆ ಹಾಕಿ ಅದರ ಪಕ್ಕದಲ್ಲೇ ಮಲಗಿದ್ದರು. ಮುಂಜಾನೆ ಸುಮಾರು 3:15ರ ಸುಮಾರಿಗೆ ಬ್ಯಾಟರಿ…