Skip to main content

Police Roundup

ಗದಗ ಅತ್ಯಾಚಾರ ಪ್ರಕರಣ: ಆರೋಪಿಗಳ ಸಂಖ್ಯೆ 4ಕ್ಕೆ ಏರಿಕೆ; ವೈದ್ಯಕೀಯ ಸಿಬ್ಬಂದಿ ಸೇರಿ ಏಳು ಮಂದಿ ಬಂಧನ

Share News

ಗದಗ (ಆ. 17): ನಗರದಲ್ಲಿ ನಡೆದ ಮಾನಸಿಕ ಅಸ್ವಸ್ಥ ಯುವತಿಯ ಮೇಲಿನ ನಿರಂತರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

 

​ಸಂತ್ರಸ್ತೆ ಮೂರು ತಿಂಗಳ ಗರ್ಭಿಣಿಯಾದ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ. ಬೆಟಗೇರಿಯ ನಿವಾಸಿಗಳಾದ ಸಿಕಂದರ ಬೇಪಾರಿ, ಶಬ್ಬೀರ ಅಹ್ಮದ್ ಲಂಗೋಟಿ, ಪ್ರದೀಪ್ ನವಲೇಕರ್ ಹಾಗೂ ಭರತ ಕೊರವರ ಎಂಬುವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

 

​ಕೃತ್ಯ ಮುಚ್ಚಿಹಾಕಲು ಅಕ್ರಮ ಗರ್ಭಪಾತ:

ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆರೋಪಿಗಳು ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾರೆ. ಆರ್.ಎಂ.ಪಿ ವೈದ್ಯ ಡಾ. ನಾಗರಾಜ್ ಕಮತರ, ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಹಾಗೂ ಸಂದೀಪ ಎಂಬುವವರ ಸಹಾಯದಿಂದ 10 ಮಾತ್ರೆಗಳನ್ನು ನೀಡಿ ಅಬಾರ್ಷನ್ ಮಾಡಿಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

 

​ಏಳು ಮಂದಿ ಬಂಧನ, ಮೆಡಿಕಲ್ ಶಾಪ್ ಮಾಲೀಕನಿಗಾಗಿ ಶೋಧ:

ಪ್ರಕರಣದ ಪ್ರಮುಖ ಆರೋಪಿಗಳು ಹಾಗೂ ಅಕ್ರಮ ಗರ್ಭಪಾತಕ್ಕೆ ಸಹಕರಿಸಿದ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ವೈದ್ಯರ ಚೀಟಿ ಇಲ್ಲದೆ ಗರ್ಭಪಾತದ ಮಾತ್ರೆ ನೀಡಿದ ಮೆಡಿಕಲ್ ಶಾಪ್ ಮಾಲೀಕನ ಬಂಧನಕ್ಕೂ ಪೊಲೀಸರು ಜಾಲ ಬೀಸಿದ್ದು, ಸ್ಟಾಫ್ ನರ್ಸ್ ರೇಖಾ ಅವರ ಹಿನ್ನೆಲೆಯ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

 

​ಈ ಅಮಾನವೀಯ ಕೃತ್ಯದ ರಾಜಿ ಪಂಚಾಯತಿಯಲ್ಲಿ ಭಾಗಿಯಾದವರಿಗೂ ಈಗ ಕಾನೂನಿನ ಶಿಕ್ಷೆಯ ಭೀತಿ ಎದುರಾಗಿದೆ. ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin