Skip to main content

Police Roundup

51 ಲಕ್ಷ ಮೌಲ್ಯದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಗುಜರಾತ್ ಮೂಲದ ಮೂವರು ಆರೋಪಿಗಳ ಬಂಧನ

Share News

ವಿಜಯಪುರ, ಆ. 7: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪ್ರಸಿದ್ಧ ಪವಾಡ ಬಸವೇಶ್ವರ ದೇಗುಲದಲ್ಲಿ ನಡೆದಿದ್ದ 51 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಗುಜರಾತ್ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

 

ಕೆಲವು ದಿನಗಳ ಹಿಂದೆ ದೇವಸ್ಥಾನದಿಂದ ಸುಮಾರು 32 ಕೆ.ಜಿ. ತೂಕದ ಬೆಳ್ಳಿ ಮೂರ್ತಿಯನ್ನು ಕಳ್ಳತನ ಮಾಡಲಾಗಿತ್ತು. ಕಳವು ಮಾಡಿದ ಬಳಿಕ ಆರೋಪಿಗಳು ಮೂರ್ತಿಯನ್ನು ಕರಗಿಸಿ ಬೆಳ್ಳಿ ಗಟ್ಟಿಗಳಾಗಿ ಪರಿವರ್ತಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಬಂಧಿತ ಆರೋಪಿಗಳನ್ನು ಗುಜರಾತ್ ಮೂಲದ ಸುರೇಶಕುಮಾರ್ ಸೋನಿ (51), ಬ್ರಹ್ಮಾರ್ ನೇಟ್ (35) ಹಾಗೂ ಇಂದ್ರಜೀತ್ ನೇಟ್ (33) ಎಂದು ಗುರುತಿಸಲಾಗಿದೆ.

 

ಆರೋಪಿಗಳಿಂದ ಪೊಲೀಸರು 23 ಕೆ.ಜಿ. ಕರಗಿಸಿದ ಬೆಳ್ಳಿ ಗಟ್ಟಿಗಳು, ಸುಮಾರು 4 ಕೆ.ಜಿ. ತೂಕದ ಮೂರ್ತಿಯ ಕತ್ತರಿಸಿದ ತುಂಡುಗಳು, ₹67 ಸಾವಿರ ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

 

ಒಟ್ಟು 52.70 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ, ಕಾರು ಹಾಗೂ ಕೃತ್ಯಕ್ಕೆ ಬಳಸಿದ ಇತರೆ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

 

ಪ್ರಕರಣದ ಯಶಸ್ವಿ ಭೇದನೆಯೊಂದಿಗೆ ದೇವಸ್ಥಾನದ ಅಮೂಲ್ಯ ಬೆಳ್ಳಿ ಮೂರ್ತಿಯ ಬಹುಪಾಲು ಭಾಗವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ವರದಿ: ಗುಂಡು ಕುಲಕರ್ಣಿ, ವಿಜಯಪುರ


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin