Skip to main content

Police Roundup

ಕಳೆದುಹೋದ ಬೀಗದ ಕೈ ಬಳಸಿ ಸರಣಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮನೆಗಳ್ಳನ ಬಂಧನ; 5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶ

Share News

ಮಾಗಡಿ: ಮನೆಯ ಹಳೆಯ ಬೀಗದ ಕೈಯನ್ನು ಕದ್ದು, ಯಾರೂ ಇಲ್ಲದ ವೇಳೆ ಸದ್ದಿಲ್ಲದೆ ಸರಣಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ಮಾಗಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಜೂನ್ 3, 2026ರಂದು ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾ ಗೇಟ್ ಬಳಿ ಇರುವ ಮನೆಯೊಂದರಲ್ಲಿ ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿತ್ತು. ಅಚ್ಚರಿಯ ಸಂಗತಿಯೆಂದರೆ, ಸುಮಾರು 2 ವರ್ಷಗಳ ಹಿಂದೆ ಈ ಮನೆಯ ಮುಖ್ಯ ಬಾಗಿಲಿನ ಎರಡು ಬೀಗದ ಕೈಗಳಲ್ಲಿ ಒಂದು ಕಳೆದುಹೋಗಿತ್ತು. ಅಂದಿನಿಂದ ಮನೆಯಲ್ಲಿದ್ದ ಹಣ ಮತ್ತು ಒಡವೆಗಳು ಆಗಾಗ ನಿಗೂಢವಾಗಿ ಕಾಣೆಯಾಗುತ್ತಿದ್ದವು. ಇದರಿಂದ ತೀವ್ರ ಅನುಮಾನಗೊಂಡ ಮನೆಮಾಲೀಕರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 

ದೂರಿನ ಅನ್ವಯ ಮಾಗಡಿ ಪೊಲೀಸರು ಮೊಕದ್ದಮೆ ಸಂಖ್ಯೆ: 132/2026, ಕಲಂ: 305 BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

ಪ್ರಕರಣದ ಬೆನ್ನತ್ತಿದ ಮಾಗಡಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿಶೇಷ ತಂಡವು ತಾಂತ್ರಿಕ ಸೂಕ್ಷ್ಮತೆ ಹಾಗೂ ಚಾಣಾಕ್ಷತನದಿಂದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ. ವಿಚಾರಣೆಯ ವೇಳೆ, ಆರೋಪಿಯೇ 2 ವರ್ಷಗಳ ಹಿಂದೆ ಸದ್ದಿಲ್ಲದೆ ಮನೆಯ ಬೀಗದ ಕೈಯನ್ನು ಕದ್ದು ಇಟ್ಟುಕೊಂಡಿದ್ದ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಮನೆಯವರು ಕಲ್ಯಾ ಗೇಟ್‌ನ ನಿವಾಸದಲ್ಲಿ ಇಲ್ಲದ ಸಮಯವನ್ನು ಹೊಂಚು ಹಾಕಿ, ಅದೇ ಬೀಗದ ಕೈ ಬಳಸಿ ಬಾಗಿಲು ತೆಗೆದು ಒಳನುಗ್ಗಿ ಕಳ್ಳತನ ಮಾಡುತ್ತಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ.

 

ಬಂಧಿತ ಆರೋಪಿಯಿಂದ ಕಳ್ಳತನ ಮಾಡಲಾಗಿದ್ದ ಈ ಕೆಳಗಿನ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ:

​ಚಿನ್ನದ ಒಡವೆಗಳು: ಸುಮಾರು 42 ಗ್ರಾಂ

​ಬೆಳ್ಳಿಯ ಸಾಮಗ್ರಿಗಳು: ಸುಮಾರು 550 ಗ್ರಾಂ

​ಒಟ್ಟು ಅಂದಾಜು ಮೌಲ್ಯ: ₹5,00,000/- (ಐದು ಲಕ್ಷ ರೂಪಾಯಿಗಳು)

 

​ಯಾರದೇ ಅನುಮಾನಕ್ಕೆ ಬಾರದಂತೆ ಹಳೇ ಬೀಗದ ಕೈ ಬಳಸಿ ಕಳ್ಳತನ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಮಾಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡದ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin