Skip to main content

Police Roundup

ಉಪ್ಪಿನಂಗಡಿ: ಇಬ್ಬರು ಮಕ್ಕಳನ್ನು ಬಾವಿಗೆಸೆದ ಪ್ರಕರಣ—ಆರೋಪಿ ಮಹಿಳೆಗೆ 15 ದಿನಗಳ ನ್ಯಾಯಾಂಗ ಬಂಧನ

Share News

ಉಪ್ಪಿನಂಗಡಿ (ಪುತ್ತೂರು): ಇಬ್ಬರು ಕಂದಮ್ಮಗಳನ್ನು ಬಾವಿಗೆ ಎಸೆದು ಓರ್ವ ಮಗುವಿನ ಸಾವಿಗೆ ಕಾರಣವಾದ ಧಾಷ್ಟ್ಯ ಎಸಗಿದ ಆರೋಪಿ ಮಹಿಳೆ ನೂರುನ್ನಿಸಾಳಿಗೆ ಪುತ್ತೂರು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

 

​ಪ್ರಕರಣದ ವಿವರ:

​ಕಲಹ ಹಾಗೂ ಕೃತ್ಯ: ಪೆರ್ನೆಯ ಮೈರಕಟ್ಟೆ ನಿವಾಸಿ ಸಿನಾನ್ ಹಾಗೂ ಆತನ ಪತ್ನಿ ನೂರುನ್ನಿಸಾ ನಡುವೆ ಫೋನ್‌ನಲ್ಲಿ ವೈವಾಹಿಕ ಕಲಹ ನಡೆದಿತ್ತು. ಇದರಿಂದ ಆಕ್ರೋಶಗೊಂಡ ನೂರುನ್ನಿಸಾ, ತನ್ನ ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ಗಂಡನ ತಂಗಿಯ ಮೂರು ವರ್ಷದ ಗಂಡು ಮಗುವನ್ನು ಮನೆ ಸಮೀಪದ ಬಾವಿಗೆ ಎಸೆದಿದ್ದಳು.

 

​ಮಗುವಿನ ಸಾವು: ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಬಾವಿಗಿಳಿದು ಮಕ್ಕಳನ್ನು ಮೇಲಕ್ಕೆತ್ತಿದರಾದರೂ, ಗಂಡನ ತಂಗಿಯ ಮಗು ‘ರಬೀಜ್’ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ನೂರುನ್ನಿಸಾಳ ಹೆಣ್ಣು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

​ನ್ಯಾಯಾಂಗ ಬಂಧನ:

ಕೃತ್ಯ ಎಸಗಿ ಮನೆಯಲ್ಲೇ ಇದ್ದ ನೂರುನ್ನಿಸಾಳನ್ನು ಬಂಧಿಸಿದ್ದ ಉಪ್ಪಿನಂಗಡಿ ಪೊಲೀಸರು, ಸೆಪ್ಟೆಂಬರ್ 20ರಂದು ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin