Skip to main content

Police Roundup

ನಕಲಿ ಔಷಧ ಜಾಲ ಪ್ರಕರಣ: ಕರ್ತವ್ಯಲೋಪ ಹಿನ್ನೆಲೆ ಎಫ್‌ಡಿಎ ಅಧಿಕಾರಿ ಓಂಕಾರೇಶ್ವರ್ ಸಸ್ಪೆಂಡ್

Share News

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಮೊದಲ ಕಠಿಣ ಕ್ರಮ ಜರುಗಿಸಿದೆ. ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ಸರ್ಕಲ್-1ರ ಸಹಾಯಕ ಔಷಧ ನಿಯಂತ್ರಕ (ADC) ಓಂಕಾರೇಶ್ವರ್ ಅವರನ್ನು ಸರ್ಕಾರ ಅಮಾನತು (ಸಸ್ಪೆಂಡ್) ಮಾಡಿ ಆದೇಶಿಸಿದೆ.

 

​ಪ್ರಕರಣದ ವಿವರ:

ಚಾಮರಾಜ್‌ಪೇಟೆಯ ‘ಕೃಪಾ ಹೆಲ್ತ್ ಕೇರ್’ ಸಂಸ್ಥೆಯಲ್ಲಿ ನಕಲಿ ಔಷಧ ಮಾರಾಟ ಜಾಲ ಬೆಳಕಿಗೆ ಬಂದಿತ್ತು. ಈ ಅಕ್ರಮದ ವಿರುದ್ಧ ನಿಯಮಾನುಸಾರ ಸೂಕ್ತ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳುವಲ್ಲಿ ಓಂಕಾರೇಶ್ವರ್ ಅವರು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ನಕಲಿ ಔಷಧ ಜಾಲದ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಕರ್ತವ್ಯಲೋಪ ಎಸಗಿದ ಅಧಿಕಾರಿಗೆ ಸರ್ಕಾರ ಈ ಮೂಲಕ ಶಾಕ್ ನೀಡಿದೆ.

 

​ನಕಲಿ ಔಷಧ ಜಾಲದ ಜಾಲವನ್ನು ಬುಡಸಮೇತ ಕಿತ್ತೊಗೆಯಲು ತನಿಖೆ ಚುರುಕುಗೊಂಡಿದ್ದು, ಈ ಪ್ರಕರಣದಲ್ಲಿ ಸಸ್ಪೆಂಡ್ ಆದ ಮೊದಲ ಉನ್ನತ ಅಧಿಕಾರಿ ಓಂಕಾರೇಶ್ವರ್ ಅವರಾಗಿದ್ದಾರೆ. ಈ ಕ್ರಮವು ಇಲಾಖೆಯ ಇತರ ಅಧಿಕಾರಿಗಳಿಗೂ ಮುನ್ನೆಚ್ಚರಿಕೆಯ ಸಂದೇಶವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin