ಹಾಸನ: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಖತರ್ನಾಕ್ ಆರೋಪಿಯನ್ನು ಹಾಸನದ ಬಡಾವಣೆ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಹಾಸನದ ಚನ್ನಪಟ್ಟಣ ಬಡಾವಣೆಯ ನಿವಾಸಿ ವರುಣ್ (27) ಬಂಧಿತ ಆರೋಪಿಯಾಗಿದ್ದಾನೆ. ಮೇ 12ರ ಸಂಜೆ ಹಾಸನದ ಕೆ.ಆರ್ ಪುರಂ ಬಡಾವಣೆಯಲ್ಲಿರುವ ‘ಎಂಜೆ ಜಿಮ್’ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಕೀರ್ತನ್ ಎಂಬುವವರ ಮೇಲೆ ಈತ ಜಿಮ್ ವರ್ಕೌಟ್ ವೇಳೆ ಭೀಕರವಾಗಿ ಹಲ್ಲೆ ನಡೆಸಿದ್ದನು. ಮೇ 12 ರಂದು ಸಂಜೆ ಎಂಜೆ ಜಿಮ್‌ನಲ್ಲಿ…
ಬೆಂಗಳೂರು: ಶಾಂತಿ, ಸೌಹಾರ್ದತೆ ಮತ್ತು ತಂತ್ರಜ್ಞಾನದ ಹಬ್ ಎಂದು ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಪುಡಿ ಪೋಕರಿಗಳು ಮತ್ತು ಗಲ್ಲಿ ರೌಡಿಗಳ ಅಟ್ಟಹಾಸಕ್ಕೆ ನಲುಗುತ್ತಿದೆ. ಸಾರ್ವಜನಿಕ ರಸ್ತೆಗಳಲ್ಲಿ ಮಚ್ಚು, ಲಾಂಗುಗಳನ್ನು ಝಳಪಿಸುವುದು, ಸಾರ್ವಜನಿಕರಿಗೆ ಬೆದರಿಕೆ ಹಾಕುವುದು ಹಾಗೂ ಅದೇ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ “ಬಿಲ್ಡಪ್ ರೀಲ್ಸ್” ಗಳನ್ನಾಗಿ ಮಾಡಿ ಮೆರೆಯುವುದು ಇತ್ತೀಚಿನ ದಿನಗಳಲ್ಲಿ ಒಂದು ಅಪಾಯಕಾರಿ ಟ್ರೆಂಡ್ ಆಗಿ ಬದಲಾಗಿದೆ. ”ನಮ್ಮ ಬೆಂಗಳೂರಿಗೆ ಏನಾಗುತ್ತಿದೆ? ಪುಡಿ ರೌಡಿಗಳಿಗೆ ಕಾನೂನಿನ ಭಯವೇ ಇಲ್ಲವೇ?” ಎಂದು ಸಾಮಾನ್ಯ…