ಯಾದಗಿರಿ: ಎಂಟು ವರ್ಷಗಳ ಕಾಲ ಪ್ರೀತಿಸಿ, ಮದುವೆಯ ಭರವಸೆ ನೀಡಿ ಈಗ ಕೈಕೊಟ್ಟಿದ್ದಾರೆ ಎಂದು ಆರೋಪಿಸಿ ಇಂಟಲಿಜೆನ್ಸ್ ಪಿಎಸ್‌ಐ ಒಬ್ಬರು ರಾಯಚೂರಿನ ಲೇಡಿ ಪೇದೆ ವಿರುದ್ಧ ನ್ಯಾಯಕ್ಕಾಗಿ ಮೊರೆ ಹೋಗಿರುವ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಇಂಟಲಿಜೆನ್ಸ್ ಪಿಎಸ್‌ಐ ವೀರೇಶ್ ಆಲೂರು ಹಾಗೂ ರಾಯಚೂರು ಗ್ರಾಮೀಣ ಠಾಣೆಯ ಲೇಡಿ ಪೇದೆ ಜಯಶ್ರೀ (ಹೆಸರು ಬದಲಾಯಿಸಲಾಗಿದೆ) ಅವರಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋಚಿಂಗ್ ಸೆಂಟರ್‌ನಲ್ಲಿ ಪರಿಚಯವಾಗಿತ್ತು. ಈ ಸ್ನೇಹ ಕಾಲಕ್ರಮೇಣ ಪ್ರೀತಿಗೆ ತಿರುಗಿ, ಕಳೆದ ಎಂಟು…
ಬೀದರ್: ಮನೆಯ ಮ್ಯೂಟೇಷನ್ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿ (VA) ಶಿವಕುಮಾರ್ ಅವರು ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ₹2.5 ಲಕ್ಷ ನಗದು ಪಡೆಯುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು ಶಿವಕುಮಾರ್ ಮತ್ತು ಅವರ ಸಹಚರನನ್ನು ವಶಕ್ಕೆ ಪಡೆದಿದ್ದಾರೆ. ಮರಕುಂದಾ ಗ್ರಾಮದ ನಿವಾಸಿ ಮಹಾದೇವ್ ಶಾಂತಪ್ಪಾ ಎಂಬುವವರು ತಮ್ಮ ಮನೆಯ ಮ್ಯೂಟೇಷನ್ (ಖಾತೆ ಬದಲಾವಣೆ) ಮಾಡಿಕೊಡುವಂತೆ ಗ್ರಾಮ ಆಡಳಿತಾಧಿಕಾರಿ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದರು. ಈ ಕೆಲಸಕ್ಕಾಗಿ ಶಿವಕುಮಾರ್ ಅವರು ಬರೊಬ್ಬರಿ ₹5 ಲಕ್ಷ ಲಂಚ…