ಕಡಪ (ಆಂಧ್ರಪ್ರದೇಶ): ಸುಂದರ ಜೀವನದ ಕನಸು ಕಾಣುತ್ತಾ ಮದುವೆಗೆ ಸಜ್ಜಾಗಿದ್ದ ಯುವತಿಯೊಬ್ಬಳು, ಭಾವಿ ಪತಿಯ ಮಾನಸಿಕ ಕಿರುಕುಳ ಹಾಗೂ ಆತನ ಹಾದಿತಪ್ಪಿದ ನಡವಳಿಕೆಯಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉನ್ನತ ಶಿಕ್ಷಣ ಪಡೆದ ಯುವತಿಯೇ ಸಾವಿನ ಹಾದಿ ಹಿಡಿದಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ. ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರಾದ ರೆಹಾನಾ ಎಂಬ ಯುವತಿ ಎಂ.ಎಸ್ಸಿ (M.Sc) ಪದವೀಧರೆಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಇವರಿಗೂ ಮತ್ತು ಶಹಜಹಾನ್ ಎಂಬ ಯುವಕನಿಗೂ ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು….
ಬೆಂಗಳೂರು ಗ್ರಾಮಾಂತರ: ತಾಯ್ತನದ ಪವಿತ್ರತೆಯನ್ನು ಗಾಳಿಗೆ ತೂರಿ, ಹೆತ್ತ ಮಗುವನ್ನೇ ಕ್ರೂರವಾಗಿ ಹತ್ಯೆ ಮಾಡಿದ ಭೀಕರ ಘಟನೆಯೊಂದು ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಬಳಿಯಿರುವ ಪ್ರತಿಷ್ಠಿತ ಫಾಕ್ಸ್‌ಕಾನ್ (Foxconn) ಕಂಪೆನಿಯಲ್ಲಿ ನಡೆದಿದೆ. ಮದುವೆಗೂ ಮುನ್ನವೇ ಜನಿಸಿದ ಮಗುವನ್ನು ಸಮಾಜಕ್ಕೆ ಹೆದರಿ ತಾಯಿಯೇ ಕತ್ತು ಸೀಳಿ ಶೌಚಾಲಯಕ್ಕೆ ಎಸೆದಿರುವ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಇರುವ ಫಾಕ್ಸ್‌ಕಾನ್ ಕಂಪೆನಿಯಲ್ಲಿ ರೇಣುಕಾ ಎಂಬುವವರು ಉದ್ಯೋಗಿಯಾಗಿದ್ದರು. ಶುಕ್ರವಾರ ಕಂಪೆನಿಯ ಶೌಚಾಲಯಕ್ಕೆ ತೆರಳಿದ್ದಾಗ ಆಕೆಗೆ ಹೆರಿಗೆಯಾಗಿದೆ. ಮದುವೆಯಾಗದ…