ಬೆಂಗಳೂರು: ಚಿನ್ನದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಕೈಚಳಕ ತೋರುತ್ತಿದ್ದ ಯುವತಿಯೊಬ್ಬಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಆಕಾಂಕ್ಷ (24) ಎಂದು ಗುರುತಿಸಲಾಗಿದ್ದು, ಈಕೆಯಿಂದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 6 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಆಕಾಂಕ್ಷ ನಗರದ ಲೇಡೀಸ್ ಪಿಜಿಯೊಂದರಲ್ಲಿ ವಾಸವಿದ್ದಳು. ಈಕೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಗ್ರಾಹಕಿಯಂತೆ ತೆರಳಿ, ಅಲ್ಲಿನ ಸಿಬ್ಬಂದಿಯ ಕಣ್ಣು ತಪ್ಪಿಸಿ ಎರಡು ಚಿನ್ನದ ಉಂಗುರಗಳನ್ನು…
ಮೈಸೂರು: ಇಲ್ಲಿನ ವಿಜಯನಗರ ಎರಡನೇ ಹಂತದ ಪಬ್‌ವೊಂದರಲ್ಲಿ ತಡರಾತ್ರಿ ನಡೆದ ಕ್ಷುಲ್ಲಕ ಗಲಾಟೆಯು ವಿಕೋಪಕ್ಕೆ ತಿರುಗಿ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಯುವಕನೊಬ್ಬ ದಾರುಣವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ನಗರದ ಗೋಕುಲಂ ನಿವಾಸಿ ನಿಶಾಂತ್ (32) ಕೊಲೆಯಾದ ದುರ್ದೈವಿ. ಈ ಕೃತ್ಯದ ಹಿಂದೆ ‘ಟ್ಯಾಂಕ್ ರಾಕಿ’ ಎಂಬುವವನ ಸಹಚರರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಿಶಾಂತ್, ತನ್ನ ಸ್ನೇಹಿತರಾದ ಸಂದೀಪ್ ಮತ್ತು ದೀಕ್ಷಿತ್ ಅವರೊಂದಿಗೆ…