ಬೆಂಗಳೂರು: ಸಿಲಿಕಾನ್ ಸಿಟಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಈಗ ಅಕ್ಷರಶಃ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಜೈಲಿನೊಳಗೆ ನಡೆದ ಸರಣಿ ಅಕ್ರಮಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 44 ಎಫ್‌ಐಆರ್‌ಗಳು (FIR) ದಾಖಲಾಗಿರುವುದು ಈಗ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಕೈದಿಗಳು ಮೊಬೈಲ್ ಫೋನ್ ಬಳಸುವುದು, ಗಾಂಜಾ ಸೇದುವುದು ಹಾಗೂ ಗುಂಪು ಘರ್ಷಣೆಗಳಲ್ಲಿ ತೊಡಗುವುದು ಸಾಮಾನ್ಯ ಎಂಬಂತಾಗಿದೆ. ಇತ್ತೀಚೆಗೆ ಕೈದಿಗಳು ಜೈಲಿನಲ್ಲೇ ಮೊಬೈಲ್ ಬಳಸಿ…
ಬೆಂಗಳೂರು: ದೋಷ ನಿವಾರಣೆ ಮತ್ತು ಪೂಜೆಯ ನೆಪದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕ ಜ್ಯೋತಿಷಿಯೊಬ್ಬನ ಕೃತ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಆರೋಪಿ ಮೋಹನ್ ಕುಮಾರ್ ಜೆ ಸದ್ಯ ತಲೆಮರೆಸಿಕೊಂಡಿದ್ದಾನೆ. ಸಂತ್ರಸ್ತ ಮಹಿಳೆಯ ಕುಟುಂಬದ ಕಷ್ಟವನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಮೋಹನ್ ಕುಮಾರ್, “ನಿಮ್ಮ ವ್ಯಾಪಾರದಲ್ಲಿ ದೋಷವಿದೆ, ಕುಟುಂಬಕ್ಕೆ ಸಂಚಕಾರವಿದೆ” ಎಂದು ಭಯ ಹುಟ್ಟಿಸಿದ್ದಾನೆ. ಇದನ್ನು ನಂಬಿದ ಮಹಿಳೆಯಿಂದ ಪೂಜೆಯ ಹೆಸರಿನಲ್ಲಿ…