ಕಲಬುರಗಿ: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ನೂರಾರು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವೈವಾಹಿಕ ಸಂಬಂಧವೊಂದಕ್ಕೆ ಧಕ್ಕೆ ತರುವಂತಹ ಹಾಗೂ ಅನುಮಾನ ಮೂಡಿಸುವಂತಹ ಆಘಾತಕಾರಿ ವೀಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪತಿಯೊಬ್ಬರು ತಮ್ಮ ಧರ್ಮಪತ್ನಿಯನ್ನು ಮತ್ತೊಬ್ಬ ಪುರುಷನೊಂದಿಗೆ ‘ರೆಡ್‌ಹ್ಯಾಂಡ್’ ಆಗಿ ಹಿಡಿದಿದ್ದಾರೆ ಎನ್ನಲಾದ ವೀಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಕಣ್ಣಿಮೆಯಿಕ್ಕುವಷ್ಟರಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಈ ವೀಡಿಯೋದಲ್ಲಿ ದಂಪತಿ ಹಾಗೂ ಅಪರಿಚಿತ ವ್ಯಕ್ತಿಯ ನಡುವೆ ತೀವ್ರ ವಾಗ್ವಾದ ಮತ್ತು ಗಲಾಟೆ ನಡೆಯುತ್ತಿರುವುದು ಕಂಡುಬಂದಿದೆ.
ವೀಡಿಯೋ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕಮೆಂಟ್‌ಗಳನ್ನು ಮಾಡುತ್ತಾ ಶೇರ್ ಮಾಡುತ್ತಿದ್ದಾರೆ. ಆದರೆ, ಈ ವೀಡಿಯೋ ಎಲ್ಲಿ, ಯಾವಾಗ ಚಿತ್ರೀಕರಿಸಲಾಗಿದೆ? ಹಾಗೂ ಇದರಲ್ಲಿರುವ ದೃಶ್ಯಗಳು ನಿಜ ಘಟನೆಯೇ ಅಥವಾ ಪ್ರಚಾರಕ್ಕಾಗಿ ಮಾಡಿದ ‘ಪ್ರಾಂಕ್’ (Prank) ವೀಡಿಯೋವೇ? ಎಂಬ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ಸೂಕ್ತ ಪುರಾವೆಗಳು ಲಭ್ಯವಾಗಿಲ್ಲ.
ವೀಡಿಯೋದ ನೈಜತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ನೆಟ್ಟಿಗರಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಸತ್ಯಾಸತ್ಯತೆ ಇನ್ನು ರಹಸ್ಯವಾಗಿಯೇ ಉಳಿದಿದೆ.