ಭುವನೇಶ್ವರ್: ಹೊಸದಾಗಿ ನಿರ್ಮಿಸುತ್ತಿದ್ದ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದ ಮನೆ ಮಾಲೀಕ, ಅವರ ಮಗ ಹಾಗೂ ಕಾರ್ಮಿಕರು ಸೇರಿ ಒಟ್ಟು ಆರು ಜನರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಒಡಿಶಾದ ಕಲಾಹಂಡಿ ಜಿಲ್ಲೆಯ ಗೌಡಾ ಕಾರ್ಲಖುಂಟ ಗ್ರಾಮದಲ್ಲಿ ನಡೆದಿದೆ. ನಿರ್ಮಾಣ ಹಂತದ ಟ್ಯಾಂಕ್‌ನಲ್ಲಿದ್ದ ಸೆಂಟ್ರಿಂಗ್ ವಸ್ತುಗಳನ್ನು ಹೊರತೆಗೆಯಲು ಹೋದಾಗ ಈ ದುರಂತ ಸಂಭವಿಸಿದೆ. ಗೌಡಾ ಕಾರ್ಲಖುಂಟ ಗ್ರಾಮದಲ್ಲಿ ಹೊಸದಾಗಿ ಶೌಚಾಲಯದ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಅದರ ಒಳಗಿದ್ದ ಸೆಂಟ್ರಿಂಗ್ ಮರ ಹಾಗೂ ಕಬ್ಬಿಣದ ವಸ್ತುಗಳನ್ನು ಹೊರತೆಗೆಯಲು ಮೊದಲು…
ಬೆಂಗಳೂರು: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಹೆಸರಲ್ಲೇ ನಕಲಿ ಬಿಡುಗಡೆ ಆದೇಶ ಸೃಷ್ಟಿಸಿದ ಜಾಲ, ಅಕ್ರಮ ಪರೋಲ್ ಮಂಜೂರಾತಿ ಹಾಗೂ ನಕಲಿ ಜಾತಿ ಪ್ರಮಾಣಪತ್ರ ಬಳಸಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ ಕಾರಾಗೃಹ ಇಲಾಖೆಯ ಅಂದಿನ ಮುಖ್ಯ ಅಧೀಕ್ಷಕ ಎಂ. ಸೋಮಶೇಖರ್ ಮತ್ತು ಗ್ಯಾಂಗ್ ವಿರುದ್ಧ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಎಫ್‌ಐಆರ್ (FIR) ದಾಖಲಾಗಿದೆ. ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಕರ್ಣ ಬಿ. ಕ್ಷತ್ರಿಯ ಅವರು ನೀಡಿದ ದೂರಿನ ಮೇರೆಗೆ ಸದ್ಯ…