ಇಂಟರ್ನೆಟ್ ಜಗತ್ತಿನಲ್ಲಿ ಅಪರಿಚಿತರನ್ನು ಕುರುಡಾಗಿ ನಂಬುವ ಮುನ್ನ ನೂರು ಬಾರಿ ಯೋಚಿಸಬೇಕು ಎಂಬುದಕ್ಕೆ ಸಾಕ್ಷಿಯಾಗಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಸಿದ್ಧ ಮ್ಯಾಟ್ರಿಮೋನಿ ಸೈಟ್ (Shaadi.com) ಮೂಲಕ ಪರಿಚಯವಾದ ಮಹಿಳೆಯನ್ನು ನಂಬಿದ 50 ವರ್ಷದ ರಾಮ್ ಅವತಾರ್ ಎಂಬ ವ್ಯಕ್ತಿ ಅತ್ಯಂತ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಲೈಂಗಿಕ ಸಾಮರ್ಥ್ಯದಲ್ಲಿ ತೃಪ್ತಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆ ಮಹಿಳೆಯೇ ಪ್ರಿಯಕರನಿಗೆ ವಿಷವಿಟ್ಟು ಕ್ರೂರವಾಗಿ ಹತ್ಯೆ ಮಾಡಿದ್ದಾಳೆ! ಮೃತ ರಾಮ್ ಅವತಾರ್ ಅವರ ಪತ್ನಿ…
ಬೆಂಗಳೂರು: ವಿದ್ಯಾಬುದ್ಧಿ ಕಲಿಸಿ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕಾದ ಶಾಲೆಯ ಮುಖ್ಯೋಪಾಧ್ಯಾಯನೇ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿ ಮಾಡಿರುವ ಆಘಾತಕಾರಿ ಹಾಗೂ ಅತಿ ಹೀನ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಕೈಗೊಂಡ ಶ್ರೀರಾಂಪುರ ಠಾಣೆಯ ಪೊಲೀಸರು, ನಿವೃತ್ತಿಯ ಅಂಚಿನಲ್ಲಿದ್ದ 59 ವರ್ಷದ ಕಾಮುಕ ಮುಖ್ಯೋಪಾಧ್ಯಾಯನನ್ನು ಶುಕ್ರವಾರದಂದು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಂದ್ರಯ್ಯ ಎಂದು ಗುರುತಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ…