ಬೆಂಗಳೂರು: ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪುಂಡ-ಪೋಕರಿಗಳ ಹಾಗೂ ಕಿಡಿಗೇಡಿಗಳ ಗೂಂಡಾ ಪ್ರವೃತ್ತಿ ಮಿತಿ ಮೀರಿ ಹೋಗಿದೆ. ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು, ಅಪಾಯಕಾರಿ ವೀಲಿಂಗ್ ಮಾಡುವುದು ಹಾಗೂ ಸಣ್ಣಪುಟ್ಟ ವಿಷಯಗಳಿಗೆ ಮಾರಕಾಸ್ತ್ರಗಳನ್ನು ಝಳಪಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ. ಈ ಕುರಿತು ನಗರದ ಸಾಮಾನ್ಯ ನಾಗರಿಕರು ತೀವ್ರ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸುತ್ತಿದ್ದು, ಖಾಕಿ ಪಡೆ ಇಂತಹ ಪುಂಡರ ವಿರುದ್ಧ ಸಿಂಗಂ ಶೈಲಿಯಲ್ಲಿ ತಿರುಗಿಬೀಳಬೇಕೆಂದು ಒತ್ತಾಯಿಸಿದ್ದಾರೆ. …
ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ 8 ಗಂಟೆಗಳ ದಾಖಲೆ ಅವಧಿಯಲ್ಲಿ ಹೆಡೆಮುರಿಕಟ್ಟುವಲ್ಲಿ ಭಟ್ಕಳ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಭಟ್ಕಳದ ಪುರವರ್ಗ ನಿವಾಸಿಗಳಾದ ಮಹಮದ್ ರಾಹಿಲ್ ಮತ್ತು ನೌಶಾದ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಭಟ್ಕಳದ ಪುರವರ್ಗದಲ್ಲಿರುವ ಮನೆಯೊಂದರ ಸದಸ್ಯರು ಹೊರಗಡೆ ಹೋಗಿದ್ದ ಸಂದರ್ಭವನ್ನು ಸಂಚು ಹೂಡಿದ್ದ ಕಳ್ಳರು, ಮೇ 18ರ ಸಂಜೆ 5:40…