ಬೆಳಗಾವಿ: ಸಂಭ್ರಮಿಸಬೇಕಾದ ಜನ್ಮದಿನದಂದೇ ಯುವತಿಯೊಬ್ಬಳು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ನಗರದ ಅಜಂ ನಗರದಲ್ಲಿ ನಡೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ಜೊತೆ ನಿಶ್ಚಿತಾರ್ಥವಾಗಿದ್ದ ವಿದ್ಯಾರ್ಥಿನಿ, ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಯುವತಿಯನ್ನು ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ (21) ಎಂದು ಗುರುತಿಸಲಾಗಿದೆ. ಈಕೆ ಅಜಂ ನಗರದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿದ್ದು, ಬಿಎಸ್‌ಸಿ ಅಂತಿಮ ವರ್ಷದ ವ್ಯಾಸಾಂಗ ಮಾಡುತ್ತಿದ್ದಳು. …
ಆಂಧ್ರಪ್ರದೇಶ: ಮಗು ತನ್ನ ಬಣ್ಣ ಹೊಂದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜನ್ಮ ನೀಡಿದ ತಂದೆಯೇ ತನ್ನ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗುವಿನ ಚರ್ಮದ ಬಣ್ಣದ ಕುರಿತು ಅನುಮಾನ ವ್ಯಕ್ತಪಡಿಸಿ ಪತ್ನಿಯ ಶೀಲವನ್ನು ಶಂಕಿಸಿದ ಈ ನರಾಧಮ, ಹಸುಗೂಸಿನ ಪ್ರಾಣವನ್ನೇ ತೆಗೆದಿದ್ದಾನೆ. ಆರೋಪಿ ಮತ್ತು ಆತನ ಪತ್ನಿಯ ನಡುವೆ ಕಳೆದ ಕೆಲವು ದಿನಗಳಿಂದ ಮಗುವಿನ ಬಣ್ಣದ ವಿಚಾರವಾಗಿ ನಿರಂತರವಾಗಿ ಜಗಳ ನಡೆಯುತ್ತಿತ್ತು. “ಮಗು ತನ್ನಂತೆ ಕಪ್ಪಗಿಲ್ಲ, ಚರ್ಮದ ಬಣ್ಣ ಭಿನ್ನವಾಗಿದೆ;…