ಬೆಳಗಾವಿ: ನಗರದಲ್ಲಿ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಎಪಿಎಂಸಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ದೇವೆಂದ್ರ ಉರ್ಫ ಡೇಬ್ಯಾ ರಮೇಶ ವಾಘಮೋರೆ (39), ಸಚೀನ ದತ್ತಾತ್ರೇಯ ಗೌಳಿ (39) ಮತ್ತು ಕಪೀಲ ಉರ್ಫ ಅಪ್ಪಾ ಭಜರಂಗ ಜಾಧವ (23) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಟ್ಟು 4.71 ಲಕ್ಷ ರೂಪಾಯಿ ಮೌಲ್ಯದ ಮಾಲನ್ನು…
ಅನಂತಪುರ/ಬೆಂಗಳೂರು: ಪೋಷಕರು ಮದುವೆ ಮಾಡಬಹುದೆಂಬ ಅತಿಯಾದ ಆತಂಕಕ್ಕೆ ಒಳಗಾದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಜರುಗಿದೆ. ಅನಂತಪುರ ಜಿಲ್ಲೆಯ ಗಾರ್ಲದಿನ್ನೆ ಮಂಡಲದ ಮರ್ತಾದ್ ಗ್ರಾಮದ ರೂಪಕೀರ್ತನಾ (17) ಮೃತಪಟ್ಟ ದುರ್ದೈವಿ. ಈಕೆ ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದಳು. ಮನೆಯಲ್ಲಿ ಪೋಷಕರು ಮಗಳಿಗೆ ಉತ್ತಮ ಸಂಬಂಧ ಬಂದರೆ ಮದುವೆ ಮಾಡುವ ಬಗ್ಗೆ ಸಾಧಾರಣವಾಗಿ ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ. ಹೆತ್ತವರ ಚರ್ಚೆಯನ್ನು…