ಮಾಲೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೆ.ಜಿ ಹಳ್ಳಿ ಗ್ರಾಮದ ಬಳಿ ಯುವಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಿಂದ ಇಡೀ ತಾಲೂಕು ಬೆಚ್ಚಿಬಿದ್ದಿದ್ದು, ಕೊಲೆಗಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಲೂರು ತಾಲೂಕಿನ ಜಂಗಾನಹಳ್ಳಿ ಗ್ರಾಮದ ನಿವಾಸಿ ಪುರುಷೋತ್ತಮ್ (26) ಕೊಲೆಯಾದ ದುರ್ದೈವಿ. ಟೇಕಲ್ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಸಂತೇ ಮೈದಾನದ ಬಳಿ ಈ ಕೃತ್ಯ ನಡೆದಿದೆ. ಇಬ್ಬರು ಯುವಕರು ಪುರುಷೋತ್ತಮ್‌ನನ್ನು ಹಿಂಬಾಲಿಸಿ, ಅಡ್ಡಗಟ್ಟಿ ತಲೆಯ ಮೇಲೆ ಕಲ್ಲಿನಿಂದ…
ಬೆಳಗಾವಿ: ಮದುವೆಯಾಗಿ ಹೊಸ ಜೀವನದ ಕನಸು ಕಾಣಬೇಕಿದ್ದ ಪತಿಗೆ ನವವಿವಾಹಿತೆಯೊಬ್ಬಳು ಬಿಗ್ ಶಾಕ್ ನೀಡಿದ್ದಾಳೆ. ತನ್ನ ಪ್ರಿಯಕರನ ಜೊತೆ ಓಡಿ ಹೋಗಲು ಪತಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೇ ಕದ್ದು ಪರಾರಿಯಾದ ವಿಚಿತ್ರ ಘಟನೆಯೊಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ. ಮೂಡಲಗಿ ತಾಲೂಕು ಮೂಲದ ಹಸೀನಾ ಎಂಬಾಕೆಗೆ ಎರಡು ತಿಂಗಳ ಹಿಂದಷ್ಟೇ ಶರೀಫ್ ಎಂಬಾತನ ಜೊತೆ ಮದುವೆಯಾಗಿತ್ತು. ಆದರೆ ಹಸೀನಾಗೆ ಮದುವೆಗೂ ಮುನ್ನವೇ ಹಣಮಂತ ಮಾರಾಪೂರ ಎಂಬುವವನ ಜೊತೆ ಪ್ರೀತಿ…