ಹೈದರಾಬಾದ್: ಪತ್ನಿಯ ದ್ರೋಹ ಹಾಗೂ ಆಕೆಯ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಘಟನೆಯಿಂದ ಮನನೊಂದ ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಂ ಎಂಬುವವರು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಸಾಯುವ ಮುನ್ನ ಬರೆದಿಟ್ಟಿರುವ 19 ಪುಟಗಳ ಡೆತ್ ನೋಟ್ ಈಗ ದಾಂಪತ್ಯ ದ್ರೋಹದ ಭೀಕರ ಸತ್ಯಗಳನ್ನು ಹೊರಹಾಕಿದೆ. ಸೀತಾರಾಂ ಮತ್ತು ರೇಣುಕಾ 2018ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಂದರವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಕಳೆದ ಒಂದೂವರೆ ವರ್ಷದಲ್ಲಿ. ತನಿಖೆಯ ಪ್ರಕಾರ, ರೇಣುಕಾ…
ಬೆಂಗಳೂರು: ನಗರದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಏರುತ್ತಿದ್ದಂತೆಯೇ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ದಾಸರಹಳ್ಳಿಯ ಹಾವನೂರಿನಲ್ಲಿರುವ ‘ಎಂಬಿ ಜ್ಯುವೆಲ್ಲರ್ಸ್’ ಮಳಿಗೆಯ ಗೋಡೆ ಕೊರೆದ ಕಳ್ಳರು ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಈ ಭೀಕರ ಕಳ್ಳತನ ನಡೆದಿದ್ದು, ಕಳ್ಳರು ಅತ್ಯಂತ ಯೋಜಿತವಾಗಿ ಸ್ಕೆಚ್ ಹಾಕಿದ್ದರು. ಜ್ಯುವೆಲ್ಲರಿ ಶಾಪ್‌ನ ಹಿಂಭಾಗದ ಕೊಠಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ನಂತರ ಮಳಿಗೆಯ ಗೋಡೆಯನ್ನು ಯಂತ್ರಗಳ ಸಹಾಯದಿಂದ ಕೊರೆದು ಒಳಪ್ರವೇಶಿಸಿದ್ದಾರೆ….