ಹೈದರಾಬಾದ್: ಸೈಬರ್ ಅಪರಾಧಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಹೈದರಾಬಾದ್ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆ ‘ಆಪರೇಷನ್ ಆಕ್ಟೋಪಸ್ 2.0’ ಭರ್ಜರಿ ಯಶಸ್ಸು ಕಂಡಿದೆ. ವಂಚಕರಿಗೆ ಅಕ್ರಮವಾಗಿ ಸಾಥ್ ನೀಡುತ್ತಿದ್ದ ವಿವಿಧ ಪ್ರಮುಖ ಬ್ಯಾಂಕುಗಳ 32 ಅಧಿಕಾರಿಗಳು ಸೇರಿದಂತೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಮಾಹಿತಿ ನೀಡಿದ್ದಾರೆ. 9 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ: ಕಳೆದ ಏಳು ದಿನಗಳಿಂದ ಹದಿನಾರು ವಿಶೇಷ ಪೊಲೀಸ್ ತಂಡಗಳು ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು…
ಬೆಂಗಳೂರು: “ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ” ಎಂಬ ಮಾತಿನಂತೆ, ಬೆಂಗಳೂರಿನಲ್ಲಿ ವಿಲಕ್ಷಣ ಪ್ರೇಮ ಕಥೆಯೊಂದು ಮದುವೆಯ ಹಂತಕ್ಕೆ ತಲುಪಿದೆ. 15 ವರ್ಷ ಹಿರಿಯವಳಾದ, 14 ವರ್ಷದ ಮಗನಿರುವ ಮಹಿಳೆಯೊಬ್ಬರು 22 ವರ್ಷದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದು, ಈಗ ರಕ್ಷಣೆ ಕೋರಿ ಪೊಲೀಸ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಕವಿತಾ (37) ಎಂಬುವವರು ಒಮ್ಮೆ ದೇವಸ್ಥಾನಕ್ಕೆ ಹೋಗುವಾಗ ಮೈಸೂರು ಮೂಲದ ಆಟೋ ಚಾಲಕ ಭಾಸ್ಕರ್ (22) ಎಂಬುವವರ ಆಟೋ ಏರಿದ್ದರು. ಈ ಮೊದಲ ಭೇಟಿಯಲ್ಲೇ ಇಬ್ಬರ ನಡುವೆ…