Skip to main content

Police Roundup

ಹಳೇ ಐಡಿ ಕಾರ್ಡ್ ಬಳಸಿ ಫ್ಲಿಪ್‌ಕಾರ್ಟ್ ಕಂಪನಿಯಲ್ಲಿ 10 ಮೊಬೈಲ್ ಕಳವು ಮಾಡಿದ್ದ ಮಾಜಿ ನೌಕರನ ಬಂಧನ

Share News

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಮಾದನಹಟ್ಟಿ ಸಮೀಪ್ ಇರುವ ಫ್ಲಿಪ್‌ಕಾರ್ಟ್ ಕಂಪನಿಯ ಹಬ್‌ನಲ್ಲಿ ಗ್ರಾಹಕರಿಗೆ ಡೆಲಿವರಿ ಮಾಡಲು ಪ್ಯಾಕ್ ಮಾಡಿ ಇಡಲಾಗಿದ್ದ 10 ದುಬಾರಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದ ಮಾಜಿ ನೌಕರನನ್ನು ಮಾಲೂರು ಪೊಲೀಸರು ಭೇಟಿಯಾಡಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

​ಇಂದುಮಂಗಲ ಗ್ರಾಮದ ನಿವಾಸಿ ವಿಶ್ವಾಸ್ ಬಂಧಿತ ಆರೋಪಿ. ಈತ ಈ ಹಿಂದೆ ಅದೇ ಫ್ಲಿಪ್‌ಕಾರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 

ಆರೋಪಿ ವಿಶ್ವಾಸ್ ತಾನು ಕೆಲಸ ಬಿಟ್ಟಿದ್ದರೂ ಸಹ, ತನ್ನ ಬಳಿಯೇ ಇದ್ದ ಹಳೆಯ ಐಡಿ ಕಾರ್ಡ್ (ID Card) ಅನ್ನು ಬಳಸಿಕೊಂಡು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಕಂಪನಿಯೊಳಗೆ ಕಾನೂನು ಬಾಹಿರವಾಗಿ ಪ್ರವೇಶಿಸಿದ್ದಾನೆ. ಒಳಗಡೆ ಹೋದವನೇ ಅತ್ಯಂತ ಚಾಣಾಕ್ಷತನದಿಂದ ಡೆಲಿವರಿಗೆ ಸಿದ್ಧವಾಗಿದ್ದ 10 ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದ.

 

​ಲಕ್ಷಾಂತರ ಮೌಲ್ಯದ ಮೊಬೈಲ್ ವಶ: ಬಂಧಿತ ಆರೋಪಿ ವಿಶ್ವಾಸ್‌ನಿಂದ ಸುಮಾರು ₹2.60 ಲಕ್ಷ ಒಟ್ಟು ಮೌಲ್ಯದ 10 ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

 

​ಈ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲಿಪ್‌ಕಾರ್ಟ್ ಸಂಸ್ಥೆಯ ದೂರಿನ ಮೇರೆಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin