ಆನೇಕಲ್: ತಾಯಿಯನ್ನು ಕಳೆದುಕೊಂಡ ತೀವ್ರ ದುಃಖದ ನಡುವೆಯೂ ಪತಿ ಹಾಗೂ ಮಕ್ಕಳು ಕೈಗೊಂಡ ಒಂದು ಉದಾತ್ತ ನಿರ್ಧಾರ, ಸಾವಿನ ದವಡೆಯಲ್ಲಿದ್ದ ಹಲವು ವ್ಯಕ್ತಿಗಳ ಬಾಳಿಗೆ ಹೊಸ ಆಶಾಕಿರಣವಾಗಿದೆ. ಮೆದುಳು ನಿಷ್ಕ್ರಿಯಗೊಂಡ (ಬ್ರೈನ್ ಡೆಡ್) 39 ವರ್ಷದ ಮಹಿಳೆಯ ಅಂಗಾಂಗ ದಾನದ ಮೂಲಕ 7ರಿಂದ 8 ಜನರ ಜೀವ ಉಳಿಸಲು ಕುಟುಂಬ ಮುಂದಾಗಿದೆ. ಜಿಗಣಿ ಸಮೀಪದ ಹಾರಗದ್ದೆಯ ದ್ಯಾವಸಂದ್ರ ಗ್ರಾಮದ ನಿವಾಸಿ ಕುಸುಮಾ (39) ಅಂಗಾಂಗ ದಾನ ಮಾಡಿ ಅಮರರಾದ ಮಹಿಳೆ. ಇವರ ಪತಿ ಜಯಶಂಕರ್ ಖಾಸಗಿ…
ಚಾಮರಾಜನಗರ: ಜಿಲ್ಲೆಯ ವಿಶ್ವಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ (BRT) ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಅಕ್ರಮವಾಗಿ ಬೆಳೆದಿದ್ದ ಬೃಹತ್ ಪ್ರಮಾಣದ ಗಾಂಜಾ ಗಿಡಗಳನ್ನು ಅಧಿಕಾರಿಗಳು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಬೈಲೂರು ವಲಯದ ಕೂಳಿಹಟ್ಟಿ ಹಾಗೂ ಬೆಳ್ಳಾಜೆ ಬೀಟ್ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ಅಬಕಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಈ ಅಕ್ರಮ ಕೃತ್ಯ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯ ಮುಖ್ಯಾಂಶಗಳು: ಬೃಹತ್ ಜಪ್ತಿ: ಸಂರಕ್ಷಿತ ಕಾಡಿನೊಳಗೆ ಅಕ್ರಮವಾಗಿ ಬೆಳೆಸಲಾಗಿದ್ದ ಸುಮಾರು…