Skip to main content

Police Roundup

ಹಳಿಯಾಳ: ಅಕ್ರಮ ಸ್ಫೋಟಕ ಸಾಗಾಟ ಜಾಲ ಪತ್ತೆ; ಜಿಲೆಟಿನ್ ಕಡ್ಡಿಗಳ ಸಹಿತ ಓರ್ವನ ಬಂಧನ

Share News

ಹಳಿಯಾಳ: ತಾಲೂಕಿನ ಹಳಿಯಾಳ-ಕಲಘಟಗಿ ಮುಖ್ಯ ರಸ್ತೆಯ ತೆಗ್ನಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಳಿಯಾಳ ಪೊಲೀಸರು ಬಂಧಿಸಿ, ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

 

ದಿನಾಂಕ 18/04/2026 ರಂದು ಸಂಜೆ ಮೋಟಾರ್ ಸೈಕಲ್ ಮೇಲೆ ಅಕ್ರಮ ಸ್ಫೋಟಕಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹಳಿಯಾಳ ತಹಶೀಲ್ದಾರ್ ಶ್ರೀ ಫಿರೋಜ್‌ ಷಾ ಅವರು ನೀಡಿದ ದೂರಿನ ಮೇರೆಗೆ ಹಳಿಯಾಳ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದು ಆರೋಪಿಯನ್ನು ಸೆರೆಹಿಡಿದಿದ್ದಾರೆ.

 

ಬಂಧಿತ ವ್ಯಕ್ತಿಯನ್ನು ತಾಲೂಕಿನ ಬಿ.ಕೆ ಹಳ್ಳಿಯ ನಿವಾಸಿ ನಾಗಪ್ಪ ದೂಳಪ್ಪ ಸಿದ್ದಕ್ಕನವರ (59) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಒಟ್ಟು 30,740 ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇದರಲ್ಲಿ 72 ನೈಟ್ರೇಟ್ ಜೆಲ್ ಜಿಲೆಟಿನ್ ಕಡ್ಡಿಗಳು, 52 ಎಲೆಕ್ಟ್ರಿಕಲ್ ಡೆಟೊನೇಟರ್‌ಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಸ್ಕೂಟರ್ ಸೇರಿವೆ.

 

ಪ್ರಾಥಮಿಕ ವಿಚಾರಣೆಯಲ್ಲಿ ಸ್ಫೋಟಕಗಳನ್ನು ಧಾರವಾಡ ಮೂಲದ ಹನುಮಂತ ಎಂಬಾತ ಪೂರೈಸಿರುವುದು ತಿಳಿದುಬಂದಿದೆ. ಸದ್ಯ ಹನುಮಂತ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಜಾಲ ಬೀಸಿದ್ದಾರೆ.

​ಯಾವುದೇ ಪರವಾನಗಿ ಇಲ್ಲದೆ ಅಪಾಯಕಾರಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್.ಐ ಕುಷ್ಠಗೌಡ ಅರಕೇರಿ ಅವರು ಪ್ರಕರಣದ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin