Skip to main content

Police Roundup

ವಯಸ್ಸಿನ ಅಂತರ ಮರೆತು ಪ್ರೇಮಪಾಶಕ್ಕೆ ಬಿದ್ದ ಜೋಡಿ: 14 ವರ್ಷದ ಮಗನಿದ್ದರೂ 22ರ ಯುವಕನ ಕೈಹಿಡಿದ ಮಹಿಳೆ!

Share News

ಬೆಂಗಳೂರು: “ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ” ಎಂಬ ಮಾತಿನಂತೆ, ಬೆಂಗಳೂರಿನಲ್ಲಿ ವಿಲಕ್ಷಣ ಪ್ರೇಮ ಕಥೆಯೊಂದು ಮದುವೆಯ ಹಂತಕ್ಕೆ ತಲುಪಿದೆ. 15 ವರ್ಷ ಹಿರಿಯವಳಾದ, 14 ವರ್ಷದ ಮಗನಿರುವ ಮಹಿಳೆಯೊಬ್ಬರು 22 ವರ್ಷದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದು, ಈಗ ರಕ್ಷಣೆ ಕೋರಿ ಪೊಲೀಸ್ ಮೆಟ್ಟಿಲೇರಿದ್ದಾರೆ.

 

ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಕವಿತಾ (37) ಎಂಬುವವರು ಒಮ್ಮೆ ದೇವಸ್ಥಾನಕ್ಕೆ ಹೋಗುವಾಗ ಮೈಸೂರು ಮೂಲದ ಆಟೋ ಚಾಲಕ ಭಾಸ್ಕರ್ (22) ಎಂಬುವವರ ಆಟೋ ಏರಿದ್ದರು. ಈ ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಪರಿಚಯ ಬೆಳೆದು, ನಂತರ ಅದು ಪ್ರೇಮಕ್ಕೆ ತಿರುಗಿದೆ. ಕವಿತಾ ಅವರಿಗೆ ಈಗಾಗಲೇ 14 ವರ್ಷದ ಮಗನಿದ್ದು, ಪತಿಯಿಂದ ದೂರವಾಗಿದ್ದರು ಎನ್ನಲಾಗಿದೆ.

 

ಕವಿತಾ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಭಾಸ್ಕರ್ ಗೌಡ ಸಮುದಾಯದವರು. ಇತ್ತ ವಯಸ್ಸಿನಲ್ಲೂ ಭಾರಿ ವ್ಯತ್ಯಾಸವಿರುವ ಕಾರಣ ಕವಿತಾ ಮನೆಯವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ನಮ್ಮಲ್ಲಿ ಈ ಮದುವೆ ಸರಿಹೋಗಲ್ಲ, ಬೇಕಿದ್ದರೆ ನಾವೇ ನಿನಗೆ ಬೇರೆ ಮದುವೆ ಮಾಡುತ್ತೇವೆ, ಆದರೆ ಈ ಯುವಕ ಬೇಡ” ಎಂದು ಮನೆಯವರು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

 

ಮನೆಯವರ ವಿರೋಧದ ನಡುವೆಯೂ ಈ ಜೋಡಿ ಇತ್ತೀಚೆಗೆ ಮದುವೆಯಾಗಿದ್ದಾರೆ. ಆದರೆ ಮದುವೆಯ ನಂತರ ತಮ್ಮ ಕುಟುಂಬ ಸದಸ್ಯರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ನವಜೋಡಿ, ತಮಗೆ ಭದ್ರತೆ ನೀಡುವಂತೆ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

​ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆಯ ಬಗ್ಗೆ ಪರ-ವಿರೋಧದ ಚರ್ಚೆಗಳು ಶುರುವಾಗಿದ್ದು, ಇಷ್ಟು ದೊಡ್ಡ ವಯಸ್ಸಿನ ಅಂತರದ ಮದುವೆ ಬೇಕಿತ್ತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin