Skip to main content

Police Roundup

ಎಐ ಕ್ಯಾಮೆರಾ ಯಡವಟ್ಟು: ಕಾರು ಚಾಲಕನಿಗೆ ‘ಹೆಲ್ಮೆಟ್‌ ಧರಿಸಿಲ್ಲ’ ಎಂದು ₹500 ದಂಡ ಹಾಕಿದ ಸಂಚಾರ ಪೊಲೀಸ್!

Share News

ಚಿಕ್ಕೋಡಿ: ಸಂಚಾರ ನಿಯಮ ಉಲ್ಲಂಘನೆ ತಡೆಯಲು ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆಯ (AI) ಕ್ಯಾಮೆರಾವೊಂದು ಮಾಡಿದ ಎಡವಟ್ಟಿನಿಂದಾಗಿ ಕಾರು ಮಾಲೀಕರೊಬ್ಬರು ತಬ್ಬಿಬ್ಬಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

 

​ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವವರೇ ಈ ವಿಚಿತ್ರ ದಂಡದ ನೋಟಿಸ್‌ಗೆ ಒಳಗಾದ ಕಾರು ಮಾಲೀಕ.

 

​ಘಟನೆಯ ವಿವರ:

ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಸುಭಾಷ್ ಅವರ ಕಾರಿನ ಫೋಟೊವನ್ನು ಸೆರೆಹಿಡಿದಿದ್ದ ಎಐ ಕ್ಯಾಮೆರಾ, ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂದು ಇ-ಚಲನ್ ಜನರೇಟ್ ಮಾಡಿತ್ತು. ವಾಟ್ಸಾಪ್‌ಗೆ ಬಂದಿದ್ದ ಸಂದೇಶವನ್ನು ತೆರೆದು ನೋಡಿದ ಮಾಲೀಕರಿಗೆ ಆಘಾತ ಕಾಯ್ದಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೂ ‘ಸವಾರ ಹೆಲ್ಮೆಟ್ ಧರಿಸಿಲ್ಲ (No Helmet)’ ಎಂಬ ಕಾರಣ ನೀಡಿ ₹500 ದಂಡ ವಿಧಿಸಲಾಗಿತ್ತು.

 

​ಕಾರು ಚಾಲನೆಗೆ ಹೆಲ್ಮೆಟ್ ನಿಯಮ ಅನ್ವಯಿಸದಿರುವಾಗ ಈ ರೀತಿಯ ದಂಡ ಬಂದಿರುವುದನ್ನು ಕಂಡು ಕಂಗಾಲಾದ ಮಾಲೀಕ ಸುಭಾಷ್, ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಎಐ ಕ್ಯಾಮೆರಾದ ತಾಂತ್ರಿಕ ಲೋಪದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin