Skip to main content

Police Roundup

ಶ್ರೀಮಂತ ಯುವಕರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅಂದರ್: 10 ಕಾಲೇಜು ವಿದ್ಯಾರ್ಥಿಗಳ ಬಂಧನ!

Share News

ದಾವಣಗೆರೆ: ನಗರದಲ್ಲಿ ಶ್ರೀಮಂತ ಯುವಕರು ಹಾಗೂ ಉದ್ಯಮಿಗಳನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಪೀಕುತ್ತಿದ್ದ ಖತರ್ನಾಕ್ ಜಾಲವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿದಂತೆ 10 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

​ಹಣದ ನೆಪದಲ್ಲಿ ಕರೆಸಿ ಅಪಹರಣ:

ನಗರದ 26 ವರ್ಷದ ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಸ್ನೇಹಿತ ಅಬ್ಬಾಸ್ ಎಂಬಾತ ಹಣಕಾಸಿನ ವ್ಯವಹಾರದ ನೆಪದಲ್ಲಿ ಶಾಮನೂರು ಬಳಿಯ ಸಮುದಾಯ ಭವನದ ಬಳಿ ಕರೆಸಿಕೊಂಡಿದ್ದ. ಈ ವೇಳೆ ಕಾರಿನಲ್ಲಿ ಬಂದ ಗ್ಯಾಂಗ್ ವ್ಯಾಪಾರಿಯನ್ನು ಅಪಹರಿಸಿ ಆಂಜನೇಯ ಬಡಾವಣೆಯ ಮನೆಯೊಂದರಲ್ಲಿ ಬಂಧಿಸಿಟ್ಟು ತೀವ್ರವಾಗಿ ಹಲ್ಲೆ ನಡೆಸಿತ್ತು. ಬಳಿಕ ವ್ಯಾಪಾರಿಯ ತಂದೆಗೆ ಕರೆ ಮಾಡಿ ₹10 ಲಕ್ಷ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು.

 

​’ಲೈವ್ ಲೋಕೇಷನ್’ನಿಂದ ಸಿಕ್ಕಿಬಿದ್ದರು:

ಅಪಹರಣಕ್ಕೊಳಗಾದ ವ್ಯಾಪಾರಿ ಪ್ರತಿದಿನ ಕುಟುಂಬದ ವಾಟ್ಸಪ್ ಗ್ರೂಪ್‌ನಲ್ಲಿ ‘ಲೈವ್ ಲೋಕೇಷನ್’ ಶೇರ್ ಮಾಡುವ ಅಭ್ಯಾಸ ಹೊಂದಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಲೊಕೇಷನ್ ಆಧಾರದ ಮೇಲೆ ಸಾರ್ವಜನಿಕರೊಂದಿಗೆ ಆಂಜನೇಯ ಬಡಾವಣೆಯ ಮನೆಗೆ ತೆರಳಿದ್ದಾರೆ. ಸಾರ್ವಜನಿಕರು ಬರುವುದನ್ನು ಕಂಡು ಗಾಬರಿಗೊಂಡ ಆರೋಪಿಗಳು ವ್ಯಾಪಾರಿಯನ್ನು ಬಿಟ್ಟು ಪರಾರಿಯಾಗಿದ್ದರು.

 

​ಖಾಕಿ ಖೆಡ್ಡಾಗೆ ಬಿದ್ದ ವಿದ್ಯಾರ್ಥಿಗಳು:

ಸಂತ್ರಸ್ತ ವ್ಯಾಪಾರಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ವಿದ್ಯಾನಗರ ಪೊಲೀಸರು, ಗಂಗಾರಾಮ್ ಪವಾರ್ ಅಲಿಯಾಸ್ ಬಬ್ಲು ಸೇರಿದಂತೆ 10 ಜನ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮುಖ್ಯ ಆರೋಪಿ ಗಂಗಾರಾಮ್ ವಿರುದ್ಧ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ 3 ಪ್ರಕರಣಗಳು ದಾಖಲಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin