Skip to main content

Police Roundup

ಕದ್ದ ಉಂಗುರ ತೊಟ್ಟು ಮಿಂಚುತ್ತಿದ್ದ ಖತರ್ನಾಕ್ ಕಳ್ಳಿ ಅರೆಸ್ಟ್: ಜ್ಯುವೆಲ್ಲರಿ ಶಾಪ್‌ಗಳೇ ಈಕೆಯ ಟಾರ್ಗೆಟ್!

Share News

ಬೆಂಗಳೂರು: ಚಿನ್ನದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಕೈಚಳಕ ತೋರುತ್ತಿದ್ದ ಯುವತಿಯೊಬ್ಬಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಆಕಾಂಕ್ಷ (24) ಎಂದು ಗುರುತಿಸಲಾಗಿದ್ದು, ಈಕೆಯಿಂದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 6 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ಬಂಧಿತ ಆರೋಪಿ ಆಕಾಂಕ್ಷ ನಗರದ ಲೇಡೀಸ್ ಪಿಜಿಯೊಂದರಲ್ಲಿ ವಾಸವಿದ್ದಳು. ಈಕೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಗ್ರಾಹಕಿಯಂತೆ ತೆರಳಿ, ಅಲ್ಲಿನ ಸಿಬ್ಬಂದಿಯ ಕಣ್ಣು ತಪ್ಪಿಸಿ ಎರಡು ಚಿನ್ನದ ಉಂಗುರಗಳನ್ನು ಕಳವು ಮಾಡಿದ್ದಳು. ವಿಶೇಷವೆಂದರೆ, ಕದ್ದ ಉಂಗುರಗಳನ್ನು ಆಕೆ ಯಾರಿಗೂ ಅನುಮಾನ ಬರದಂತೆ ತನ್ನ ಕೈ ಬೆರಳುಗಳಿಗೇ ಹಾಕಿಕೊಂಡು ಓಡಾಡುತ್ತಿದ್ದಳು.

 

ಅಂಗಡಿಯಲ್ಲಿ ಚಿನ್ನದ ಉಂಗುರ ನಾಪತ್ತೆಯಾದ ಬಗ್ಗೆ ಮಾಲೀಕರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕಾಂಕ್ಷಳ ಕೈಚಳಕ ಬಯಲಿಗೆ ಬಂದಿದೆ. ಸಿಸಿಟಿವಿ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈಕೆ ಇದೇ ರೀತಿ ಬೇರೆ ಕಡೆಗಳಲ್ಲಿಯೂ ಕಳ್ಳತನ ಮಾಡಿದ್ದಾಳೆಯೇ ಎಂಬ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin