Skip to main content

Police Roundup

ಬೆಂಗಳೂರು: ಹೆತ್ತ ತಾಯಿಯನ್ನೇ ಮಹಡಿ ಮೇಲಿಂದ ತಳ್ಳಿ ಕೊಂದ ಪಾಪಿ ಪುತ್ರ!

Share News

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ತಾಯಿಯನ್ನು ಆರೈಕೆ ಮಾಡಲಾಗದ ಪುತ್ರನೊಬ್ಬ, ಆಕೆಯನ್ನು ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಿ ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ರಾಜರಾಜೇಶ್ವರಿ ನಗರದ (RR Nagar) ಬೆಮಲ್ ಲೇಔಟ್‌ನಲ್ಲಿ ನಡೆದಿದೆ.

 

ಸಾವಿತ್ರಮ್ಮ (72) ಎಂಬುವವರೇ ಕೊಲೆಯಾದ ದುರ್ದೈವಿ. ಇವರ ಪುತ್ರ ವೆಂಕಟೇಶ್ (42) ಈ ಕೃತ್ಯ ಎಸಗಿದ ಆರೋಪಿ. ಸಾವಿತ್ರಮ್ಮ ಅವರು ಕಳೆದ 4-5 ವರ್ಷಗಳಿಂದ ಪಾರ್ಶ್ವವಾಯು (Paralysis) ಪೀಡಿತರಾಗಿದ್ದರು. ತೀವ್ರ ಅನಾರೋಗ್ಯದ ಕಾರಣ ಅವರು ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ.

 

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳುವುದು ಆರೋಪಿ ವೆಂಕಟೇಶ್‌ಗೆ ಹೊರೆಯಾಗಿ ಪರಿಣಮಿಸಿತ್ತು ಎನ್ನಲಾಗಿದೆ. ಇದೇ ಬೇಸರ ಮತ್ತು ಹತಾಶೆಯಿಂದ ಮಗ ಕ್ರೂರವಾಗಿ ವರ್ತಿಸಿದ್ದಾನೆ. ಇಂದು ಮನೆಯ ಮೂರನೇ ಮಹಡಿಯ ಮೇಲೆ ತಾಯಿಯನ್ನು ಕರೆದೊಯ್ದು, ಅಲ್ಲಿಂದ ಕೆಳಕ್ಕೆ ತಳ್ಳಿದ್ದಾನೆ. ಕೆಳಕ್ಕೆ ಬಿದ್ದ ರಭಸಕ್ಕೆ ಸಾವಿತ್ರಮ್ಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

 

ವಿಷಯ ತಿಳಿದ ಕೂಡಲೇ ರಾಜರಾಜೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಪುತ್ರ ವೆಂಕಟೇಶ್‌ನನ್ನು ವಶಕ್ಕೆ ಪಡೆಯಲಾಗಿದೆ. “ಅನಾರೋಗ್ಯದಿಂದ ಕೂಡಿದ್ದ ತಾಯಿಯ ಆರೈಕೆ ಮಾಡಲು ಸಾಧ್ಯವಾಗದೆ ಈ ಕೃತ್ಯ ಎಸಗಿರುವುದಾಗಿ” ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

​ಹೆತ್ತ ತಾಯಿಯನ್ನು ಕಂದಮ್ಮನಂತೆ ಸಲಹಬೇಕಾದ ಮಗನೇ ಮೃಗವಾಗಿ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin